ಜಯಾ ನಿಧನ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಪನ್ನೀರ್ ಸೆಲ್ವಂ

ತಮಿಳುನಾಡು ಸಿಎಂ ಜಯಲಲಿತಾ ನಿಧನದ ಬಳಿಕ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಒ ಪನ್ನೀರ್ ಸೆಲ್ವಂ ಅವರು ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ್ದು, ಆಡಳಿತ ಕುರಿತಂತೆ ಸಚಿವರೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಒ ಪನ್ನೀರ್ ಸೆಲ್ವಂ ಸಂಪುಟ ಸಭೆ (ಸಂಗ್ರಹ ಚಿತ್ರ)
ಒ ಪನ್ನೀರ್ ಸೆಲ್ವಂ ಸಂಪುಟ ಸಭೆ (ಸಂಗ್ರಹ ಚಿತ್ರ)

ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ನಿಧನದ ಬಳಿಕ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಒ ಪನ್ನೀರ್ ಸೆಲ್ವಂ ಅವರು ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ್ದು, ಆಡಳಿತ ಕುರಿತಂತೆ ಸಚಿವರೊಂದಿಗೆ  ಮಹತ್ವದ ಚರ್ಚೆ ನಡೆಸಿದರು.

ಜಯಲಲಿತಾ ನಿಧನರಾದ ಬೆನ್ನಲ್ಲೇ ಸಿಎಂ ಆಗಿ ಪ್ರಮಾಣಾ ವಚನ ಸ್ವೀಕರಿಸಿದ್ದ ಅವರ ಆಪ್ತ ಒ ಪನ್ನೀರ್ ಸೆಲ್ವಂ ಅವರು ಇದೇ ಮೊದಲ ಬಾರಿಗೆ ತಮ್ಮ ನೂತನ ಸಚಿವರೊಂದಿಗೆ ಸಭೆ ನಡೆಸಿದರು. ಈ ವೇಳೆ ತಮಿಳುನಾಡು  ಸರ್ಕಾರದ ಮುಂದಿರುವ ಸವಾಲುಗಳು ಹಾಗೂ ಜಯಲಲಿತಾ ಅವರ ಪ್ರಮುಖ ಯೋಜನೆಗಳನ್ನು ಮುಂದುವರೆಸುವ ಕುರಿತು ಒಕ್ಕೊರಲಿನ ನಿರ್ಧಾರ ಕೈಗೊಂಡರು. ಬಳಿಕ ಸಂಪುಟದ ಇಡೀ ಸಚಿವರೊಂದಿಗೆ ಮರೀನಾ ಬೀಚ್  ನಲ್ಲಿರುವ ಜಯಲಲಿತಾ ಅವರ ಸಮಾಧಿಯತ್ತ ತೆರಳಿದ ಒ ಪನ್ನೀರ್ ಸೆಲ್ವಂ ಹಾಗೂ ಸಚಿವರು ಜಯಾ ಅವರ ಸಮಾಧಿಗೆ ಪುಷ್ಮನಮನವ ಸಲ್ಲಿಸಿದರು.

ಶಶಿಕಲಾರನ್ನು ಭೇಟಿ ಮಾಡಿದ್ದ ನೂತನ ಸಿಎಂ

ಇನ್ನು ಸಚಿವ ಸಂಪುಟಕ್ಕೂ ಮುನ್ನ ಅಂದರೆ ನಿನ್ನೆ ಚೆನ್ನೈನ ಪೊಯಸ್ ಗಾರ್ಡನಲ್ಲಿರುವ ಜಯಲಲಿತಾ ಅವರ ನಿವಾಸಕ್ಕೆ ತೆರಳಿದ್ದ ಪನ್ನೀರ್ ಸೆಲ್ವಂ ಅವರು, ಜಯಾ ಆಪ್ತೆ ಶಶಿಕಲಾ ಅವರನ್ನು ಭೇಟಿ ಮಾಡಿ ಕೆಲಕಾಲ ಚರ್ಚೆ  ನಡೆಸಿದರು. ಈ ಮಹತ್ವದ ಸಭೆಯಲ್ಲಿ ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು. ಪಕ್ಷದ ಮುಂದಿನ ನಿರ್ಧಾರಗಳು ಹಾಗೂ ಜಯಾ ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಎದುರಾಗಬಹುದಾದ ಸವಾಲಗಳ ಕುರಿತಂತೆ  ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಮಾತನಾಡಿದ್ದ ಪಕ್ಷದ ವಕ್ತಾರ ಪೊನ್ನಯ್ಯ ಅವರು ಶೀಘ್ರದಲ್ಲೇ ಪಕ್ಷಕ್ಕೆ ನೂತನ ಪ್ರಧಾನ ಕಾರ್ಯದರ್ಶಿಗಳನ್ನು ಒಮ್ಮತದ ನಿರ್ಧಾರದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com