ಮುಂಬೈ: ದೇಶದ ಜನತೆಯ ಕೆಲಸವನ್ನು ವಿದೇಶಿಗರು ಕಸಿದುಕೊಳ್ಳುವುದಕ್ಕೆ ಕಡಿವಆಣ ಹಾಕಲು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ನಿರ್ಧಾರ ತೆಗೆದುಕೊಂಡಂತೆ, ಪ್ರಧಾನಿ ನರೇಂದ್ರ ಮೋದಿ ಪಾಕ್ ಕಲಾವಿದರ ವಿಷಯದಲ್ಲಿ ಕಠಿಣ ನಿಲುವು ತೆಗೆದುಕೊಳ್ಳುತ್ತಾರಾ ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಕೇಳಿದೆ.