ಪೆಲೆಟ್ ಗನ್'ಗಳನ್ನು ಬಳಸುವುದಕ್ಕೂ ಮುನ್ನ ಆಲೋಚಿಸಿ: ಸುಪ್ರೀಂಕೋರ್ಟ್

ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಲೆಟ್ ಗನ್ ಗಳನ್ನು ಬಳಕೆ ಮಾಡುವುದಕ್ಕೂ ಮುನ್ನ ಆಲೋಚನೆ ಮಾಡಿ ಬಳಕೆ ಮಾಡಿ ಎಂದು ಸೇನೆಗೆ ಸುಪ್ರೀಂಕೋರ್ಟ್ ಗುರುವಾರ ಸೂಚನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಲೆಟ್ ಗನ್ ಗಳನ್ನು ಬಳಕೆ ಮಾಡುವುದಕ್ಕೂ ಮುನ್ನ ಆಲೋಚನೆ ಮಾಡಿ ಬಳಕೆ ಮಾಡಿ ಎಂದು ಸೇನೆಗೆ ಸುಪ್ರೀಂಕೋರ್ಟ್ ಬುಧವಾರ ಸೂಚನೆ ನೀಡಿದೆ.

ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿನ ವಾತಾವರಣ ತೀವ್ರವಾಗಿ ಹದಗೆಟ್ಟಿದ್ದು, ಕಳೆದ 3 ತಿಂಗಳಿನಿಂದಲೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪ್ರತಿಭಟನೆಗಳನ್ನು ತಡೆಯುವ ಸಲುವಾಗಿ ಸೇನೆ ಪೆಲೆಟ್ ಗಳನ್ನು ಬಳಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಾಗಿ ಪೆಲೆಟ್ ಗನ್ ಗಳನ್ನು ಬಳಕೆ ಮಾಡುತ್ತಿದೆ ಎಂದು ಹೇಳಿ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು.

ಈ ಅರ್ಜಿಯನ್ನು ಪರಿಶೀಲನೆ ನಡೆಸಿರುವ ಮುಖ್ಯ ನ್ಯಾಯಮೂರ್ಥಿ ಟಿಎಸ್. ಠಾಕುರ್ ಅವರಿದ್ಧ ಪೀಠ, ಪೆಲೆಟ್ ಗನ್ ಗಳನ್ನು ಬಳಕೆ ಮಾಡುವುದಕ್ಕೂ ಮುನ್ನ ಸೇನೆ ಆಲೋಚನೆ ನಡೆಸಬೇಕಿದ್ದು, ಬೀದಿಯಲ್ಲಿನ ನಡೆಯುವ ಪ್ರತಿಭಟನೆಗಳನ್ನು ನಿಲ್ಲಿಸುವುದಕ್ಕಾಗಿ ಪೆಲೆಟ್ ಗನ್ ಗಳನ್ನು ಬಳಕೆ ಮಾಡಬಾರದು. ಪರಿಸ್ಥಿತಿಯನ್ನು ಅವಲೋಕಿಸಿ ಹಾಗೂ ಅಗತ್ಯ ಬಿದ್ದರೆ ಮಾತ್ರ ಆಲೋಚನೆ ಮಾಡಿ ಪೆಲೆಟ್ ಗನ್ ಗಳನ್ನು ಬಳಕೆ ಮಾಡಬೇಕೆಂದು ತಿಳಿಸಿದೆ.

ಈ ಹಿಂದೆ ಪೆಲೆಟ್ ಗನ್ ಬಳಕೆ ಕುರಿತಂತೆ ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ಏನಾದರೂ ವರದಿ ಸಲ್ಲಿಕೆ ಮಾಡಿದ್ದರೆ, ವರದಿಯನ್ನು ನೀಡುವಂತೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್ ವರದಿಯನ್ನು 6 ವಾರಗಳೊಳಗಾಗಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಪೆಲೆಟ್ ಗನ್ ಬಳಕೆ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಪೆಲೆಟ್ ಗನ್ ಬಳಕೆ ಕುರಿತಂತೆ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಕಲ್ಲು ತೂರಾಟ ನಡೆಸುವವರು ಹಾಗೂ ಉಗ್ರರ ನಡುವಿನ ವ್ಯತ್ಯಾಸ ಅರಿತು ಪೆಲೆಟ್ ಗನ್ ಬಳಕೆ ಮಾಡುವಂತೆ ಭದ್ರತಾ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com