ಜಯಾಲಲಿತಾ 'ವೈಕುಂಠ ಸಮಾರಾಧನೆ': ಮಂಡ್ಯದಿಂದ ತಮಿಳುನಾಡಿಗೆ ವಿಶೇಷ ಬಸ್ ವ್ಯವಸ್ಥೆ

ತಮಿಳುನಾಡಿನಲ್ಲಿ ಜಯಾಲಲಿತಾ ವೈಕುಂಠ ಸಮಾರಾಧನೆ ಕಾರ್ಯ ಶನಿವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಮಂಡ್ಯದಿಂದ ತಮಿಳುನಾಡಿಗೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ...
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಾಲಲಿತಾ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಾಲಲಿತಾ

ಮಂಡ್ಯ: ತಮಿಳುನಾಡಿನಲ್ಲಿ ಜಯಾಲಲಿತಾ ವೈಕುಂಠ ಸಮಾರಾಧನೆ ಕಾರ್ಯ ಶನಿವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಮಂಡ್ಯದಿಂದ ತಮಿಳುನಾಡಿಗೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ.

ಜಯಾಲಲಿತಾ ಅವರ ಅಂತಿನ ಸಂಸ್ಕಾರವನ್ನ ವಿಧಿ ವಿಧಾನಗಳೊಂದಿಗೆ ಮಾಡದ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಜಯಲಲಿತಾ ಅವರಿಗೆ ಮರು ಅಂತ್ಯ ಸಂಸ್ಕಾರವನ್ನು ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಜಯಲಲಿತಾ ಅವರ ವೈಕುಂಠ ಸಮಾರಾಧನೆಯನ್ನು ಇಂದು ನಡೆಯಲಿದ್ದು, ಶ್ರೀ ವೈಷ್ಣವ ಪದ್ಧತಿಯಂತೆ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ, ಮೊಗೂರು,ಬನ್ನೂರು, ಮೇಲುಕೋಟೆ, ನರಸೀಪುರ, ಪಾಂಡವಪುರದಲ್ಲಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಕೊಳ್ಳೆಗಾಲದ ವೀರಾಂಜನೇಯ ಸ್ವಾಮಿ ದೇವಲಾಯದ ಪ್ರಧಾನ ಅರ್ಚಕರಾದ ರಾಘವನ್ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಲಿದೆ. ವೈಕುಂಠ ಸಮಾರಾಧಾನೆಗೆ ಜಯಾಲಲಿತಾ ಅವರ ಸ್ನೇಹಿತರು, ಬಂಧುಗಳು ಹಾಗೂ ಇನ್ನಿತರೆ ಹತ್ತಿರದವರು ಪಾಲ್ಗೊಳ್ಳಲಿದ್ದು, ಪೂಜೆಯಿಂದ ಜಯಾ ಅವರ ಆತ್ಮ ವೈಕುಂಠಕ್ಕೆ ಹೋಗಲಿದೆ ಎಂದು ರಾಘವನ್ ಅವರು ಹೇಳಿದ್ದಾರೆ.

ಜಯಾಲಲಿತಾ ಅವರ ಸಾವಿನ ಕುರಿತಂತೆ ಸಂಬಂಧಿಯಾಗಿರುವ ಅಮೃತಾ ಅವರು ಮಾತನಾಡಿದ್ದು, ಜಯಾಲಲಿತಾ ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳಿದ್ದು, ಸಾವು ಕುರಿತಂತೆ ಸೂಕ್ತ ರೀತಿಯಲ್ಲಿ ಕೇಂದ್ರ ಸರ್ಕಾರ ತನಿಖೆ ನಡೆಸಬೇಕಿದೆ. ಹಾಗೂ ಸಾವು ಕುರಿತ ಸತ್ಯಾಂಶವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಜಯಾಲಲಿತಾ ಅವರ ಅಂತಿಮ ಸಂಸ್ಕಾರವನ್ನು ಈ ರೀತಿಯಾಗಿ ಮಾಡುತ್ತೀವೆಂದು ಎಂದಿಗೂ ನಾವು ಆಲೋಚನೆಯನ್ನೇ ಮಾಡಿರಲಿಲ್ಲ. ಜಯಾ ಅವರ ಸಾವು ಸ್ವಾಭಾವಿಕವಲ್ಲ. ಪೂರ್ವಯೋಜಿತ ಹತ್ಯೆಯಾಗಿದೆ. ಜಯಾ ಅವರ ಆಪ್ತ ಸ್ನೇಹಿತೆಯಾಗಿದ್ದ ಶಶಿಕಲಾ ಅವರೇ ಹತ್ಯೆ ಮಾಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹತ್ಯೆ ಮಾಡಿದ್ದಾರೆಂದು  ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com