ರಾಹುಲ್ ಭೂಕಂಪಕ್ಕಾಗಿ ಕಾಯುತ್ತಿದ್ದೇವೆ; ಬಿಜೆಪಿ ವ್ಯಂಗ್ಯ

ರಾಹುಲ್ ಗಾಂಧಿಯವರ ಭೂಕಂಪಕ್ಕಾಗಿ ಕಾಯುತ್ತಿದ್ದೆವು, ಆದರೆ, ಬೆಳಗಾವಿಯಲ್ಲಿ ಅಂತಹ ಯಾವುದೇ ಭೂಕಂಪಗಳು ಆಗಲೇ ಇಲ್ಲ ಎಂದು ಬಿಜೆಪಿ ಭಾನುವಾರ ವ್ಯಂಗ್ಯವಾಡಿದೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on: 

ನವದೆಹಲಿ: ರಾಹುಲ್ ಗಾಂಧಿಯವರ ಭೂಕಂಪಕ್ಕಾಗಿ ಕಾಯುತ್ತಿದ್ದೆವು, ಆದರೆ, ಬೆಳಗಾವಿಯಲ್ಲಿ ಅಂತಹ ಯಾವುದೇ ಭೂಕಂಪಗಳು ಆಗಲೇ ಇಲ್ಲ ಎಂದು ಬಿಜೆಪಿ ಭಾನುವಾರ ವ್ಯಂಗ್ಯವಾಡಿದೆ.

ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೋಟು ನಿಷೇಧ ಕುರಿತಂತೆ ಮಾತನಾಡಲು ಆರಂಭಿಸಿದರೆ ಸಂಸತ್ತಿನಲ್ಲಿ ಭೂಕಂಪವಾಗುತ್ತದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿನಾಯಕ ಎಸ್ ಪ್ರಕಾಶ್ ಅವರು, ರಾಹುಲ್ ಗಾಂಧಿಯವರು ನಿನ್ನೆಯಷ್ಟೇ ಬೆಳಗಾವಿಗೆ ಭೇಟಿ ನೀಡಿದ್ದರು. ಬೆಳಗಾವಿಯಲ್ಲಿ ರಾಹುಲ್ ಅವರು ಭೂಕಂಪ ಸಂಭವಿಸುವಂತೆ ಮಾಡುತ್ತಾರೆಂದುಕೊಂಡಿದ್ದವೆವು. ಆದರೆ, ಅಂತಹ ಯಾವುದೇ ಭೂಕಂಪಗಳು ಸಂಭವಿಸಿಲಿಲ್ಲ. ಏನಾಯಿತು? ರಾಹುಲ್ ಎನ್ನೆಲ್ಲಿ ಬಾಂಬ್ ಸ್ಫೋಟಿಸುತ್ತಾರೆಂದು ಪ್ರಶ್ನಿಸಿದ್ದಾರೆ.

ಸಂವೇದನಾಶೀಲ ಹೇಳಿಕೆಯನ್ನು ಹಾಗೂ ಆರೋಪಗಳನ್ನು ಮಾಡುವುದು ಸುಲಭ. ಆದರೆ, ರಾಹುಲ್ ರಂತಹ ಜನರಿಗೆ ಅವುಗಳನ್ನು ನಿರೂಪಿಸುವುದು ಬಹಳ ಕಷ್ಟವಾಗುತ್ತದೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಮಾತನಾಡುವಾಗ ಪ್ರತೀಯೊಂದು ಪದವನ್ನು ಆಲೋಚಿಸಿ ಮಾತನಾಡಬೇಕು. ಪ್ರಮುಖವಾಗಿ ಪ್ರಧಾನಮಂತ್ರಿಗಳ ವಿರುದ್ಧ ನೀಡುವ ಹೇಳಿಕೆಯನ್ನು ಎಚ್ಚರದಿಂದ ನೀಡಬೇಕಾಗುತ್ತದೆ. ರಾಹುಲ್ ಅವರ ಹೇಳಿಕೆಯಿಂದ ಅವರ ವರ್ಚಸ್ಸಿಗೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗಿದೆ. ಪ್ರಸ್ತುತ ರಾಹುಲ್ ಅವರು ತಾವೇ ನಿರ್ಮಾಣ ಮಾಡಿಕೊಂಡಿರುವ ಸಮಸ್ಯೆಗಳ ಕುರಿತು ಆಲೋಚನೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com