ಬೆಳ್ಳಂಬೆಳಗ್ಗೆ ಸಿಂಹಗಳು ಗ್ರಾಮಕ್ಕೆ ನುಗ್ಗಿದೆ. ಮನೆ ಪಕ್ಕ ಕಟ್ಟಿಹಾಕಿದ್ದ ಹಸುವಿನ ಮೇಲೆ ದಾಳಿ ಮಾಡಿದ ಸಿಂಹಗಳು ಹಸುವನ್ನು ತಿಂದು ತೇಗಿದೆ. ಇನ್ನು ಸಿಂಹಗಳನ್ನು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗ್ರಾಮಸ್ಥರು ತಮ್ಮ ಮನೆಗಳ ಮೇಲೆ ನಿಂತು ವೀಕ್ಷಿಸಿದ್ದಾರೆ. ಮನೆ ಮಾಳಿಗೆ ಮೇಲೆ ನಿಂತು ಜನರು ಕೂಗುತ್ತಿದ್ದರಿಂದ ಹೆದರಿದ ಸಿಂಹಗಳು ಅತ್ತಿಂದಿತ್ತ ಓಡಾಡಿದ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿತ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.