ಜಗಳದಲ್ಲಿ ನೆರೆಮನೆಯಾಕೆಯ 5 ವರ್ಷದ ಮಗುವನ್ನು 15ನೇ ಮಹಡಿಯಿಂದ ಎಸೆದ ಮಹಿಳೆ

ಮಹಿಳೆಯೊಬ್ಬಳು ತನ್ನ ನೆರೆಮನೆಯಾಕೆಯ ಜೊತೆ ಜಗಳ ಮಾಡಿಕೊಂಡು 5 ವರ್ಷದ ಹೆಣ್ಣು ಮಗುವನ್ನ 15ನೇ ಮಹಡಿಯಿಂದ ಎಸೆದಿದ್ದಾಳೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬಯಿ: ಮಹಿಳೆಯೊಬ್ಬಳು ತನ್ನ ನೆರೆಮನೆಯಾಕೆಯ ಜೊತೆ ಜಗಳ ಮಾಡಿಕೊಂಡು 5 ವರ್ಷದ ಹೆಣ್ಣು ಮಗುವನ್ನ 15ನೇ ಮಹಡಿಯಿಂದ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ.

15ನೇ ಮಹಡಿಯಿಂದ ಎಸೆಯಲ್ಪಟ್ಟ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಬೈಸುಲ್ಲಾದಲ್ಲಿರುವ ವಿಗ್ನಹರ್ತಾ ಕಟ್ಟಡದಲ್ಲಿ ಸೋಮವಾರ ಸುಮಾರು 12.30ರ ವೇಳೆಗೆ ಈ ಘಟನೆ ನಡೆದಿದೆ.

ಕಟ್ಟಡದಲ್ಲಿರುವ ನರೆಹೊರೆಯ ಇಬ್ಬರು ಮಹಿಳೆಯರ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ಜಗಳ ತಾರಕಕ್ಕೇರಿದ್ದು, ಆರೋಪಿ ಮಹಿಳೆ 5 ವರ್ಷದ ಮಗುವನ್ನ ಬಾಲ್ಕನಿಯಿಂದ ಎಸೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com