ಫೇಮಾ ಉಲ್ಲಂಘನೆ: 5 ವಿದೇಶಿ ಬ್ಯಾಂಕುಗಳಿಗೆ ಆರ್‌ಬಿಐ ದಂಡ

ವಿದೇಶಿ ವಿನಿಮಯ(ಫೇಮಾ) ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಐದು ವಿದೇಶಿ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ದಂಡ ವಿಧಿಸಿದೆ...
ರಿಸರ್ವ್ ಬ್ಯಾಂಕ್
ರಿಸರ್ವ್ ಬ್ಯಾಂಕ್
ಮುಂಬೈ: ವಿದೇಶಿ ವಿನಿಮಯ(ಫೇಮಾ) ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಐದು ವಿದೇಶಿ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ದಂಡ ವಿಧಿಸಿದೆ. 
ಡಾಯ್ಚ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್, ಬ್ಯಾಂಕ್ ಆಫ್ ಅಮೆರಿಕ, ಬ್ಯಾಂಕ್ ಆಫ್ ಟೋಕಿಯೋ ಮತ್ತು ದಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಬ್ಯಾಂಕುಗಳಿಗೆ ಆರ್ಬಿಐ ದಂಡ ವಿಧಿಸಿದೆ. 
1999ರ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯ ಅಗತ್ಯ ಸೂಚನೆಗಳ ವರದಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಆರ್ಬಿಐ ಡಾಯ್ಚ ಬ್ಯಾಂಕ್ 20 ಸಾವಿರ, ಇನ್ನುಳಿದ ನಾಲ್ಕು ಬ್ಯಾಂಕುಗಳಿಗೆ ತಲಾ 10 ಸಾವಿರ ದಂಡ ವಿಧಿಸಲಾಗಿದೆ ಎಂದು ಆರ್ಬಿಐ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com