'ಬ್ಲಾಕ್ ಮೇಲ್' ಮಹಿಳೆಯನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಎಟಿಎಸ್ ಅಧಿಕಾರಿ

ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳದ ಎಎಸ್ಪಿ ಆಶೀಶ್ ಪ್ರಭಾಕರ್ ಎಂಬುವರು ಮಹಿಳೆಯನ್ನು ಗುಂಡಿಟ್ಟು ಕೊಂದು...
ಪೊಲೀಸ್
ಪೊಲೀಸ್
Updated on
ಜೈಪುರ: ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳದ ಎಎಸ್ಪಿ ಆಶೀಶ್ ಪ್ರಭಾಕರ್ ಎಂಬುವರು ಮಹಿಳೆಯನ್ನು ಗುಂಡಿಟ್ಟು ಕೊಂದು ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಕಳೆದ ರಾತ್ರಿ ಜೈಪುರದ ಬಾಂಬೈ ಆಸ್ಪತ್ರೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಎಸ್ಯುವಿ ವಾಹನದಲ್ಲಿ ಆಶೀಶ್ ಪ್ರಭಾಕರ್ ಅವರು ಮಹಿಳೆಯನ್ನು ತನ್ನ ಸರ್ವಿಸ್ ರಿವಾಲ್ವರ್ ನಿಂದ ಗುಂಡಿಟ್ಟು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. 
ಆತ್ಮಹತ್ಯೆಗೂ ಮುನ್ನ ಪ್ರಭಾಕರ್ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಾವು ತಪ್ಪು ದಾರಿ ಹಿಡಿದಿದ್ದು ಅದಕ್ಕಾಗಿ ಪತ್ನಿಯಲ್ಲಿ ಕ್ಷಮೆ ಕೋರುತ್ತೇನೆ. ಇನ್ನು ಮಹಿಳೆ ತನಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ತನಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗಳ ದೂರವಾಣಿ ಸಂಖ್ಯೆಯನ್ನು ಡೆತ್ ನೋಟು ನಲ್ಲಿ ಬರೆದಿದ್ದಾರೆ. 
ಪ್ರಭಾಕರ್ ಅವರು ಆತ್ಮಹತ್ಯೆಗೂ ಮುನ್ನ ಪೊಲೀಸ್ ನಿಯಂತ್ರಣಾ ಕೊಠಡಿಗೆ ಮಾಹಿತಿ ನೀಡಿ ಬಾಂಬೈ ಆಸ್ಪತ್ರೆಯ ಪಕ್ಕದಲ್ಲಿ ಅನುಮಾನ್ಸಪದ ಎಸ್ಯುವಿ ವಾಹನ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com