ಛತ್ರಪತಿ ಶಿವಾಜಿ ಸ್ಮಾರಕ ಸಮಾರಂಭ ಬಿಜೆಪಿ ಕಾರ್ಯಕ್ರಮವಲ್ಲ: ಶಿವಸೇನೆ

ಛತ್ರಪತಿ ಶಿವಾಜಿ ಸ್ಮಾರಕ ನಿರ್ಮಾಣ ಸಮಾರಂಭವನ್ನು ಬಿಜೆಪಿ ಕಾರ್ಯಕ್ರಮದವಲ್ಲ, ಎಲ್ಲರೂ ಒಂದು ಕೂಡಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ಶಿವಸೇನೆ ಶನಿವಾರ ಹೇಳಿದೆ...
ಶಿವಸೇನೆ ನಾಯಕಿ ಮನಿಷಾ ಕಯಾಂಡೆ
ಶಿವಸೇನೆ ನಾಯಕಿ ಮನಿಷಾ ಕಯಾಂಡೆ

ಮುಂಬೈ: ಛತ್ರಪತಿ ಶಿವಾಜಿ ಸ್ಮಾರಕ ನಿರ್ಮಾಣ ಸಮಾರಂಭವನ್ನು ಬಿಜೆಪಿ ಕಾರ್ಯಕ್ರಮದವಲ್ಲ, ಎಲ್ಲರೂ ಒಂದು ಕೂಡಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ಶಿವಸೇನೆ ಶನಿವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕಿ ಮನಿಷಾ ಕಯಾಂಡೆ ಅವರು, ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಕೊನೆಗೂ ನಿರ್ಮಾಣವಾಗುತ್ತಿದ್ದು, ದೇಶದಲ್ಲಿರುವ ಪ್ರತೀಯೊಬ್ಬ ಭಾರತೀಯರು ಹೆಮ್ಮೆ ಪಡುವಂತಹ ದಿನ ಇದಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆಯವರೂ ಕೂಡ ಭಾಗಿಯಾಗುತ್ತಿದ್ದಾರೆ. ಸ್ಮಾರಕ ನಿರ್ಮಾಣಕ್ಕಾಗಿ ಹೋರಾಟ ಮಾಡಿದವರು, ಸ್ಮಾರಕ ನಿರ್ಮಾಣಕ್ಕೆ ಕಾರಣರಾದವರನ್ನು ಸರ್ಕಾರ ನೆನೆಯಬೇಕಿದ್ದು ಕಾರ್ಯಕ್ರಮದಲ್ಲಿ ಎಲ್ಲರೂ ಒಂದಾಗಬೇಕಿದೆ. ಇದು ಬಿಜೆಪಿಯ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷದವರೂ ಸೇರಿ ನಡೆಸಿಕೊಡುತ್ತಿರುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ದ ಕಿಡಿಕಾಡಿರುವ ಅವರು, ಸರ್ಕಾರ ಯೋಜನೆ ಕೈಗೆತ್ತಿಕೊಂಡ ದಿನದಿಂದಲೂ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಸರ್ಕಾರವನ್ನು ಟೀಕೆ ಮಾಡುತ್ತಲೇ ಬಂದಿದೆ. 15 ವರ್ಷಗಳಿಂದ ತಾವು ನಡೆಸಿದ ಸರ್ಕಾರ ಹೇಗಿತ್ತು ಎಂಬುದನ್ನು ಅವರು ನೆನೆಯಬೇಕಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠರ ಮನವೊಲಿಕೆ ಮಾಡಲು ಮುಂದಾಗಿರುವ ಬಿಜೆಪಿ ಸರ್ಕಾರ ಹಿಂದೂ ಮಹಾಸಾಗರದಲ್ಲಿ ಛತ್ರಪತಿ ಶಿವಾಜಿಯ ಸ್ಮಾರಕ ನಿರ್ಮಿಸಲು ರು.3,600 ಕೋಟಿ ಗಳ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com