ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಕಾಲ್ತುಳಿತ; 25 ಭಕ್ತರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಭಾನುವಾರ ಸುಮಾರು 25ಕ್ಕೂ ಅಧಿಕ ಮಂದಿ ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಥನಂತಿಟ್ಟ: ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಭಾನುವಾರ ಸುಮಾರು 25ಕ್ಕೂ ಅಧಿಕ ಮಂದಿ ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಕರ ಪೂಜೆ ನಿಮಿತ್ತ ಸ್ವಾಮಿ ಅಯ್ಯಪ್ಪ ಸ್ವಾಮಿಗೆ ಇಂದು ಸಂಜೆ "ತಂಗ ಅಂಗಿ" ಎಂಬ ವಿಶೇಷ ಪೂಜೆ ಮತ್ತು ಮೆರವಣಿಗೆ ಮಾಡುವ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಭಕ್ತರು ಮುಂದಾಗಿದ್ದರಿಂದ ನೂಕು ನುಗ್ಗಲು  ಸಂಭವಿಸಿ ಕಾಲ್ತುಳಿತವಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಸುಮಾರು 25ಕ್ಕೂ ಅಧಿಕ ಮಂದಿ ಭಕ್ತರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಭಕ್ತರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಪಂಪೆಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲ ಭಕ್ತರಿಗೆ ಸನ್ನಿಧಾನದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಮಂಡಲ ಪೂಜೆ ನಿಮಿತ್ತ ಅರಣ್ ಮುಲ ಶ್ರೀ ಪಾರ್ಥ ಸಾರಥಿ ದೇಗುಲದಿಂದ ಅಯ್ಯಪ್ಪ ಸ್ವಾಮಿಗೆ ಚಿನ್ನಾಭರಣ ಮತ್ತು ವಿಶೇಷ ವಸ್ತ್ರಗಳನ್ನು ಮೆರವಣಿಗೆ ಮೂಲಕ ಶಬರಿ ಮಲೆಯಲ್ಲಿರುವ ಸನ್ನಿಧಾನಕ್ಕೆ ತರಲಾಗುತ್ತಿತ್ತು. ಈ ವೇಳೆ  ಆಭರಣವಿರುವ ಪೆಟ್ಟಿಗೆಯ ದರ್ಶನ ಪಡೆಯಲು ಸಾವಿರಾರು ಭಕ್ತರು ಏಕಾಏಕಿ ನುಗ್ಗಿದ್ದರಿಂದ ನೂಕು ನುಗ್ಗಲು ಸಂಭವಿಸಿದೆ ಎಂದು ದೇವಾಲಯದ ಭದ್ರತಾ ಸಿಬ್ಬಂದಿಗಳು ತಿಳಿಸಿದ್ದಾರೆ.

2011ರಲ್ಲಿ ಮಕರ ಜ್ಯೋತಿ ವೀಕ್ಷಿಣೆ ವೇಳೆ ಸಂಭವಿಸಿದ್ದ ಭೀಕರ ಕಾಲ್ತುಳಿತದ ವೇಳೆ 106 ಭಕ್ತರು ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com