ಭಾರತ 2008 ರಿಂದ 2015ರ ವರೆಗೆ ರಕ್ಷಣಾ ಸಲಕರಣೆಗಳನ್ನು ಖರೀದಿಸಲು 34 ಶತಕೋಟಿ ಡಾಲರ್ ವ್ಯಯಿಸಿದೆ. ಆದರೆ ವಿಶ್ವದ ಅಗ್ರ ಶಸ್ತ್ರಾಸ್ತ್ರ ಖರೀದಿ ದೇಶವಾಗಿರುವ ಸೌದಿ ಅರೇಬಿಯಾ 93.5 ಬಿಲಿಯನ್ ಡಾಲರ್ ವ್ಯಯಿಸಿದೆ ಎಂದು ಅಭಿವೃದ್ಧಿಶೀಲ ದೇಶಗಳ ಸಾಂಪ್ರದಾಯಿಕ ಶಸ್ತ್ರಾಸ್ತ್ರ ವರ್ಗಾವಣೆ 2008-2015ರ ಅಮೆರಿಕ ಸಂಸದೀಯ ವರದಿ ಹೇಳಿದೆ.