ಹಳೇ ನೋಟು ಕುರಿತು ಸುಗ್ರೀವಾಜ್ಞೆ: ಕೇಂದ್ರ ನಿರ್ಧಾರ ಸ್ವಾಗತಿಸಿದ ಜೆಡಿ(ಯು)

ನಿಷೇಧಿತ ಹಳೇ ನೋಟುಗಳ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಸಂಯುಕ್ತ ಜನತಾದಳದ ಪಕ್ಷ ಗುರುವಾರ ಸ್ವಾಗತಿಸಿದೆ...
ಜೆಡಿ(ಯು) ನಾಯಕ ರಾಜೀವ್ ರಂಜನ್
ಜೆಡಿ(ಯು) ನಾಯಕ ರಾಜೀವ್ ರಂಜನ್

ನವದೆಹಲಿ: ನಿಷೇಧಿತ ಹಳೇ ನೋಟುಗಳ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಸಂಯುಕ್ತ ಜನತಾದಳದ ಪಕ್ಷ ಗುರುವಾರ ಸ್ವಾಗತಿಸಿದೆ.

ನಿನ್ನೆಯಷ್ಟೇ ಕೇಂದ್ರ ಸರ್ಕಾರ ನಿಷೇಧಿತ ಹಳೇ ನೋಟುಗಳ ಕುರಿತಂತೆ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತ್ತು. ಮಾರ್ಚ್ 31ರ ನಂತರ 10ಕ್ಕಿಂತ ಹೆಚ್ಚು ಹಳೆಯ 500 ಮತ್ತು 1000 ನೋಟುಗಳನ್ನು ಹೊಂದಿದ್ದರೆ 4 ವರ್ಷಗಳ ಜೈಲು ಶಿಕ್ಷೆ ಮತ್ತು ಹೊಂದಿರುವ ನೋಟಿನ ಮೊತ್ತದ 5 ಪಟ್ಟು ಹೆಚ್ಚು ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿತ್ತು. ಈ ವಿಧೇಯಕಕ್ಕೆ ಪ್ರಧಾನಮಂತ್ರಿ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.

ಕೇಂದ್ರದ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿ(ಯು) ನಾಯಕ ರಾಜೀವ್ ರಂಜನ್ ಅವರು, ಎಷ್ಟು ಹಿನ್ನಡೆಯಂಟಾಗುತ್ತಿದೆ ಎಂಬುದು ಬೇಕಿಲ್ಲ. ನೋಟು ನಿಷೇಧ ಕುರಿತಂತೆ ಸಾಕಷ್ಟು ಉತ್ತಮ ನಿರ್ಧಾರನಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ನಿನ್ನೆ ತೆಗೆದುಕೊಂಡ ನಿರ್ಧಾರ ಉತ್ತಮವಾಗಿದ್ದು, ನಿರ್ಧಾರ ಕುರಿತಂತೆ ಕೇಂದ್ರವನ್ನು ಪ್ರಶಂಸಿಸಬೇಕಿದೆ. ಕೇಂದ್ರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮನ್ರೇಗಾ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಕನಿಷ್ಠ ವೇತನವನ್ನು ಹೆಚ್ಚಳ ಮಾಡುವಂತೆ ಕಾಂಗ್ರೆಸ್ ಆಗ್ರಹಿಸುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ಆಗ್ರಹವನ್ನೂ ಒಪ್ಪಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com