
ನವದೆಹಲಿ: ನಜೀಬ್ ಜಂಗ್ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಂಗೀಕರಿಸಿದ್ದು, ತೆರವಾಗಿದ್ದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಅನಿಲ್ ಬೈಜಾಲ್ ಅವರನ್ನು ಗುರುವಾರ ನೇಮಕ ಮಾಡಿದ್ದಾರೆ.
ನಜೀಬ್ ಜಂಗ್ ಅವರು ಡಿಸೆಂಬರ್ 22 ರಂದು ದಿಢೀರನೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಅನಿಲ್ ಬೈಜಾಲ್ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಕೇಂದ್ರದ ಈ ಶಿಫಾರಸಿಗೆ ಇಂದು ಪ್ರಣಬ್ ಮುಖರ್ಜಿಯವರು ಗ್ರೀನ್ ಸಿಗ್ನಲ್ ನೀಡಿದ್ದು, ದೆಹಲಿ ಲೆಫ್ಟಿನೆಂಟ್ ಗವರ್ನರ್ ಹಿದ್ದುಗೆ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕೇಂದ್ರ ಮಾಡಿ ಗೃಹ ಕಾರ್ಯದರ್ಶಿ ಅನಿಲ್ ಬೈಜಾಲ್ ಅವರನ್ನು ನೇಮಕ ಮಾಡಿದ್ದಾರೆ.
1969ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಬೈಜಾಲ್ ಅವರು 2006ರಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದರು. 2004ರ ಮೇ ತಿಂಗಳಿನಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಯಿಂದ ಬೈಜಾಲ್ ಅವರನ್ನು ಕಿತ್ತುಹಾಕಲಾಗಿತ್ತು. 2006ರಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಬಳಿಕ ಹಲವಾರು ಕಾರ್ಪೋರೇಟ್ ಸಂಸ್ಥೆಗಳ ಮಂಡಳಿಗಳಲ್ಲಿ ಬೈಜಾಲ್ ಅವರು ಸೇವೆ ಸಲ್ಲಿಸಿದ್ದರು.
Advertisement