
ನವದೆಹಲಿ: ಭೂಗತ ಪಾತಕಿ ಚೋಟಾ ರಾಜನ್ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಮಂಗಳವಾರ ಮೊದಲ ಜಾರ್ಜ್ ಶೀಟ್ ನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಪಾತಕಿ ಚೋಟಾ ರಾಜನ್ ವಿದೇಶಕ್ಕೆ ತೆರಳಲು ಮೂವರು ಅಧಿಕಾರಿಗಳು ಸಹಾಯ ಮಾಡಿದ್ದು, ವಿದೇಶಕ್ಕೆ ಹಾರಲು ಪಾಸ್ ಪೋರ್ಟ್ ಗಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಸಿಬಿಐ ಹೇಳಿದೆ.
ಜಯ್ ಶ್ರೀ ರಹತೆ, ದೀಪಕ್ ನಟ್ವರ್ಲಾಲ್ ಮತ್ತು ಲಲಿತಾ ಲಯಾಮನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಚಾರ್ಜ್ ಶೀಟ್ ಕುರಿತಂತೆ ಮಾಹಿತಿ ನೀಡಿರುವ ಅಧಿಕಾರಿ, ಆರ್.ಕೆ.ಗೌರ್ ಅವರು, ಚೋಟಾ ರಾಜನ್ ಮತ್ತು ಮೂವರು ಅಧಿಕಾರಿಗಳ ವಿರುದ್ಧ ಈಗಾಗಲೇ ವಿಶೇಷ ನ್ಯಾಯಾಲಯದಲ್ಲಿ ಜಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
Advertisement