ತೆಲಂಗಾಣ: ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿ ಸಾನ್ವಿ ಸಾವು

ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ವ್ಯವಸಾಯ ಭೂಮಿಯಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕಿ ಅಸುನೀಗಿದ್ದಾಳೆ...
ಮೃತ ಸಾನ್ವಿ ಚಿತ್ರ
ಮೃತ ಸಾನ್ವಿ ಚಿತ್ರ

ಹೈದರಾಬಾದ್: ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ವ್ಯವಸಾಯ ಭೂಮಿಯಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕಿ ಅಸುನೀಗಿದ್ದಾಳೆ.

ನಲ್ಗೊಂಡ ಜಿಲ್ಲೆಯ ಶಾಲಿಗೌರರಾಮ್ ಮಂಡಳದ ವಲ್ಲಾಲ್ ಹಳ್ಳಿಯ ನಿಂಬೆ ತೋಟದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಸಾನ್ವಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು, ವೈದ್ಯರು ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. 10 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಮಗುವನ್ನು ಹೊರ ತೆಗೆಯಲಾಯಿತು. ಕೂಡಲೇ ನಕ್ರೆಕಲ್ ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟೋತ್ತಿಗಾಗಲೇ ಬಾಲಕಿ ಸಾನ್ವಿ ಮೃತಪಟ್ಟಿದ್ದು, ವೈದ್ಯರು ಅದನ್ನು ದೃಢಪಡಿಸಿದರು.

ಸಾನ್ವಿಯ ಪೋಷಕರು ಇದೇ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ತೋಟದ ಮಾಲೀಕ ಕೊಳವೆ ಬಾವಿಯೊಂದನ್ನು ಕೊರೆಸಿದ್ದರು. ಆದರೆ ನೀರು ಸಿಗಲಿಲ್ಲ. ಇದೇ ತೋಟದಲ್ಲಿ ಸಾನ್ವಿ ಪೋಷಕರು ವಾಸವಾಗಿದ್ದು, ನಿನ್ನೆ ಮಧ್ಯಾಹ್ನ ಆಟವಾಡುತ್ತಿದ್ದ ಸಾನ್ವಿ ಆಯಾ ತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ವೈದ್ಯರು ಘಟನಾ ಸ್ಥಳಕ್ಕೆ ಬಂದು ಕಾರ್ಯಾಚರಣೆ ಕೈಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com