
ಹೈದರಾಬಾದ್: ಚುನಾವಣೆ ಆಯೋಗಗಳು ಮಾಡುವ ಯಡವಟ್ಟುಗಳಿಗೆ ಹೈದರಾಬಾದ್ ನಲ್ಲಿ ನಡೆದಿರುವ ಈ ಘಟನೆಯೊಂದು ಪ್ರಮುಖ ಉದಾಹರಣೆ ಎನ್ನಬಹುದು. ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಹೆಸರು ಮತ್ತು ಭಾವಚಿತ್ರವನ್ನು ಒಳಗೊಂಡಿರುವ ಅಧಿಕೃತ ವೋಟರ್ ಐಡಿ (ಗುರುತಿನ ಚೀಟಿ)ಯನ್ನು ವ್ಯಕ್ತಿಯೋರ್ವ ಹೊಂದಿರುವ ವಿಷಯವೊಂದು ಬುಧವಾರ ನಾಗರೀಕ ಚುನಾವಣೆ ವೇಳೆ ತಿಳಿದುಬಂದಿದೆ.
ಹೈದರಾಬಾದ್ ಚಾರ್ಮಿನಾರ್ ನಲ್ಲಿರುವ ಗೌಲಿಪುರದಲ್ಲಿ ನಾಗರೀಕ ಚುನಾವಣೆಯೊಂದು ನಡೆಯುತ್ತಿತ್ತು. ವ್ಯಕ್ತಿಯೋರ್ವ ಮತ ಕ್ಷೇತ್ರಕ್ಕೆ ಬಂದು ಮತದಾನ ಮಾಡಲು ಸಿಬ್ಬಂದಿಗಳಿಗೆ ಐಡಿಯನ್ನು ನೀಡಿದ್ದಾನೆ. ಈ ವೇಳೆ ಐಡಿಯಲ್ಲಿ ಸಲ್ಮಾನ್ ಖಾನ್ ಹೆಸರು ಹಾಗೂ ಅವರ ಭಾವಚಿತ್ರವಿರುವುದು ಕಂಡುಬಂದಿದೆ. ಇದನ್ನು ಕಂಡ ಅಧಿಕಾರಿಗಳು ಕೂಡಲೇ ಐಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ವ್ಯಕ್ತಿಗೆ ಮತದಾನ ಮಾಡಲು ಅವಕಾಶವನ್ನು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.
ವ್ಯಕ್ತಿಗೆ ನೀಡಲಾಗಿರುವ ವೋಟರ್ ಐಡಿಯಲ್ಲಿ ಸಲ್ಮಾನ್ ಖಾನ್ ಅವರ ಹೆಸರಲ್ಲದೆ, ಅವರ ತಂದೆಯ ಹೆಸರು ಸಲೀಂ ಖಾನ್ ಎಂದು ನೀಡಲಾಗಿದೆ. ಆದರೆ, ವಯಸ್ಸು ಮಾತ್ರ 64 ಎಂದು ನಮೂದಿಸಲಾಗಿದೆ.
Advertisement