ಲೋಕಸಭಾ ಚಾನಲ್ ನೊಂದಿಗೆ ರಾಜ್ಯಸಭಾ ಟಿವಿ ವಿಲೀನಕ್ಕೆ ಪ್ರಧಾನಿ ಕಾರ್ಯಾಲಯದ ಪ್ರಸ್ತಾವನೆ

ರಾಜ್ಯಸಭಾ ಟಿವಿ ಯಲ್ಲಿ ಸರ್ಕಾರದ ವಿರೋಧಿ ವಿಷಯಗಳು ಪ್ರಸ್ತಾಪವಾಗುತ್ತಿರುವುದರಿಂದ ರಾಜ್ಯಸಭಾ ಚಾನಲ್ ನ್ನು ಲೋಕಸಭಾ ಚಾನಲ್ ನೊಂದಿಗೆ ವಿಲೀನಗೊಳಿಸಲು ಚಿಂತನೆ...
ರಾಜ್ಯಸಭಾ ಟಿವಿ (ಸಂಗ್ರಹ ಚಿತ್ರ)
ರಾಜ್ಯಸಭಾ ಟಿವಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ರಾಜ್ಯಸಭಾ ಟಿವಿ ಯಲ್ಲಿ ಕೇಂದ್ರ ಸರ್ಕಾರದ ವಿರೋಧಿ ವಿಷಯಗಳು ಪ್ರಸ್ತಾಪವಾಗುತ್ತಿರುವುದರಿಂದ ಸರ್ಕಾರಕ್ಕೆ ಮುಜುಗರವಾಗುತ್ತಿರುವುದರಿಂದ ಪ್ರಧಾನಿ ಕಾರ್ಯಾಲಯ ರಾಜ್ಯಸಭಾ ಚಾನಲ್ ನ್ನು ಲೋಕಸಭಾ ಚಾನಲ್ ನೊಂದಿಗೆ  ವಿಲೀನಗೊಳಿಸಲು ಚಿಂತನೆ ನಡೆಸಿದೆ.
ರಾಜ್ಯಸಭಾ ಟಿವಿ ರಾಜ್ಯಸಭೆಗಾಗಿಯೇ ಪ್ರತ್ಯೇಕವಾಗಿರುವ ಚಾನಲ್ ಆಗಿದೆ, ಮೇಲ್ಮನೆಯಲ್ಲಿ ವಿರೋಧಪಕ್ಷಕ್ಕೆ ಬಹುಮತವಿದ್ದು ಸರ್ಕಾರಕ್ಕೆ ಮುಜುಗರವಾಗುವಂತಹ ವಿಷಯಗಳು ರಾಜ್ಯಸಭಾ ಟಿವಿಯಲ್ಲಿ ಪ್ರಸಾರವಾಗುತ್ತಿವೆ. ಹಲವು ಬಾರಿ ಸರ್ಕಾರದ ಯೋಜನೆಗಳ ಬಗ್ಗೆ ನಡೆಯುವ ಚರ್ಚೆಗಳಲ್ಲಿ ವಿರೋಧ ಪಕ್ಷದ ಸಂಸದರೇ ಭಾಗವಹಿಸುತ್ತಿದ್ದು, ಸರ್ಕಾರದ ಯೋಜನೆಗಳ ವಿರೋಧಿ  ವಿಷಯಗಳು ಪ್ರಸಾರವಾಗುತ್ತಿವೆ. ಇದರಿಂದ ಪ್ರಧಾನಿ ಕಾರ್ಯಾಲಯ ಅಸಮಾಧಾನಗೊಂಡಿದೆ.   
ರಾಜ್ಯಸಭಾ ಟಿವಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದ್ದು, ಪ್ರಧಾನಿ ಕಾರ್ಯಾಲಯ ಲೋಕಸಭಾ ಟಿವಿಯೊಂದಿಗೆ ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸುವ ಪ್ರಸ್ತಾವನೆ ಹೊಂದಿದೆ.  ವಿಲೀನಪ್ರಕ್ರಿಯೆ ನಂತರ ಸಂಸದ್ ಟಿವಿ ಎಂದು ನಾಮಕರಣ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. 
ರಾಜ್ಯಸಭಾ ಟಿವಿ, ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೇ ಖುದ್ದು ಆಸಕ್ತಿ ವಹಿಸಿದ್ದ ಯೋಜನೆಯಾಗಿದ್ದು, ರಾಜ್ಯಸಭಾ ಟಿವಿಗೆ ಉಪರಾಷ್ಟ್ರಪತಿಗಳೇ ಅಧ್ಯಕ್ಷರೂ ಆಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com