ಗೋವಾದಲ್ಲಿ ಶಂಕಿತ ಉಗ್ರ, ನಿವೃತ್ತ ಮೇಜರ್ ಜನರಲ್ ಪುತ್ರನ ಬಂಧನ

ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಡೆಹ್ರಾಡೂನ್ ನಿವಾಸಿ 44 ವರ್ಷದ ಸಮಿರ್ ಸರ್ದಾನನ್ನು ಗುರುವಾರ ಗೋವಾದಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಡೆಹ್ರಾಡೂನ್ ನಿವಾಸಿ 44 ವರ್ಷದ ಸಮಿರ್ ಸರ್ದಾನನ್ನು ಗುರುವಾರ ಗೋವಾದಲ್ಲಿ ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಬಂಧಿತ ಸಮಿರ್ ಸರ್ದಾನ ನಿವೃತ್ತ ಮೇಜರ್ ಜನರಲ್ ಅವರ ಪುತ್ರ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಸರ್ದಾನ ಮೂಲತ ಹಿಂದೂವಾಗಿದ್ದು, ಇಸ್ಲಾಂಗಾಗಿ ಕೆಲಸ ಮಾಡುತ್ತಿದ್ದ. ಸದ್ಯ ಆರೋಪಿ ಗೋವಾ ಉಗ್ರ ನಿಗ್ರಹ ದಳದ ವಶದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಾಸ್ಕೋ ರೇಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ನಡೆದುಕೊಳ್ಳುತ್ತಿದ್ದ ಸರ್ದಾನ ಅವರ ಬಗ್ಗೆ ರೇಲ್ವೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗೋವಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸರ್ದಾನ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com