
ನವದೆಹಲಿ: ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರನ್ನೊಳಗೊಂಡ ಸಮಿತಿಯ ಸಲಹೆಗಳನ್ನು ಅಳವಡಿಸಿಕೊಳ್ಳದೇ ಇರುವ ಬಗ್ಗೆ ಗರಂ ಆಗಿರುವ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಸದಾ ಒಂದಲ್ಲಾ ಒಂದು ವಿವಾದಗಳನ್ನು ಸುತ್ತಿಕೊಳ್ಳುತ್ತಲೇ ಇರುವ ಬಿಸಿಸಿಐನ ಆಡಳಿತ ಪಾರದರ್ಶಕವಾಗಿ ಇರುವಂತೆ ಮತ್ತು ಜಟಿಲಗೊಳ್ಳದಂತೆ ನಿಭಾಯಿಸುವ ಸಲುವಾಗಿ ಸುಪ್ರೀಂಕೋರ್ಟ್ ನಿಂದಲೇ ನೇಮಕಗೊಂಡಿದ್ದ ನ್ಯಾಯಮೂರ್ತಿ ಲೋಧಾ ಸಮಿತಿ ಕೊಟ್ಟಿದ್ದ ಸಲಹೆಗಳನ್ನು ಒಪ್ಪದೇ ಇರುವ ಪ್ರಶ್ನೆಯೇ ಇಲ್ಲ. ಸಮಿತಿ ಶಿಫಾರಸನ್ನು ಒಪ್ಪಲೇ ಬೇಕಾಗುತ್ತದೆ, ನಿಮಗೆ ಇನ್ನೊಂದು ಇನಿಂಗ್ಸ್ ಇಲ್ಲ’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಲೋಧಾ ಸಮಿತಿ ತನ್ನ ಶಿಫಾರಸನ್ನು ವರದಿಯನ್ನು ಸುಪ್ರೀಂ ಕೋರ್ಟ್ಗೂ ಸಲ್ಲಿಸಿದೆ. ಆದರೆ ಬಿಸಿಸಿಐ ಇನ್ನೂ ಇದನ್ನು ಅಳವಡಿಸಿಕೊಳ್ಳದೆ ಇರುವುದಕ್ಕೆ ಸುಪ್ರೀಂಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡು, ಮಾರ್ಚ್ 3ರ ಒಳಗೆ ಉತ್ತರಿಸುವಂತೆ ಹೇಳಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ ಆದ ಅವ್ಯವಹಾರ, ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳ ಹಿನ್ನೆಲೆಯಲ್ಲಿ ಬಿಸಿಸಿಐ ಸುಧಾರಣೆ ಕ್ರಮಗಳ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ 2015ರಲ್ಲಿ ಲೋಧಾ ಸಮಿತಿಯನ್ನು ರಚಿಸಿತ್ತು.
Advertisement