
ಲಖನೌ; ಜಿಲ್ಲಾಧಿಕಾರಿಣಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಕಾರಣಕ್ಕೆ ಯುವಕನೊಬ್ಬ ಜೈಲು ಪಾಲಾಗಿರುವ ಘಟನೆಯೊಂದು ಉತ್ತರಪ್ರದೇಶ ಬುಲಾಂದಶಾಹರ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಹಿರಿಯರು ಜಿಲ್ಲಾಧಿಕಾರಿ ಬಿ.ಚಂದ್ರಕಲಾ ಎಂಬುವವರೊಂದಿಗೆ ಸಭೆಯೊಂದನ್ನು ನಡೆಸುತ್ತಿದ್ದರು. ಈ ವೇಳೆ 18 ವರ್ಷದ ಯುವಕನೊಬ್ಬ ಊರ ಹಿರಿಯರೊಂದಿಗೆ ಬಂದಿದ್ದಾನೆ. ಈ ವೇಳೆ ಜಿಲ್ಲಾಧಿಕಾರಿಯನ್ನು ಕಂಡ ಆತ ಚಂದ್ರಕಲಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಅಧಿಕಾರಿಗಳು ಸೆಲ್ಫಿ ತೆಗೆಯದಂತೆ ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಯುವಕ ಮತ್ತೆ ಉತ್ತಮ ಸೆಲ್ಫಿಗಾಗೆ ಮತ್ತೆ ಪ್ರಯತ್ನ ಪಟ್ಟಿದ್ದಾನೆ.
ಇದರಿಂದಾಗಿ ಸಿಟ್ಟಾದ ಜಿಲ್ಲಾಧಿಕಾರಿ ಚಂದ್ರಕಲಾ ಅವರು ಯುವಕನ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಯುವಕನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಯುವಕನಿಗೆ ಇಂದು ಜಾಮೀನು ದೊರೆತಿದೆ.
ಈ ವರದಿಯನ್ನು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯನ್ನು ನೋಡಿದ್ದ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಅವಮಾನ ಮಾಡಿದ್ದಾರೆಂದು ಹೇಳಿ ವರಿದಿಗಾರನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ದೂರನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಗಳು, ಜಿಲ್ಲಾಧಿಕಾರಿಗೆ ಈಗಾಗಲೇ ಫೇಸ್ ಬುಕ್ ನಲ್ಲಿ 4.5 ಲಕ್ಷ ಅನುಯಾಯಿಗಳಿದ್ದಾರೆ. ಇಷ್ಟು ಮಾತ್ರಕ್ಕೆ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ಯಾರೂ ಮಾಡಬಾರದು. ಮಹಿಳೆಯನ್ನು ಒಬ್ಬ ವ್ಯಕ್ತಿ ನೋಡುತ್ತಿದ್ದರೆ ಅದು ಆಕೆಗೆ ಮುಜುಗರ ಎನಿಸಿದರೆ ಇದೂ ಕೂಡ . ಕಾನೂನಿಗೆ ವಿರುದ್ಧವಾದದ್ದು. ಈ ರೀತಿಯ ವರ್ತನೆಗಳನ್ನು ನಾವು ಬೆಳೆಯಲು ಬಿಡಬಾರದು ಎಂದು ಹೇಳಿದ್ದಾರೆ.
ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪತ್ರಿಕೆಯ ಸಂಪಾದಕ ದಿಲಿಪ್ ಅವಸ್ಥಿ ಅವರು, ಘಟನೆ ನಿಜಕ್ಕೂ ಖಂಡನೀಯ. ಒಂದು ಚಿಕ್ಕ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನಕ್ಕೆ ಒಬ್ಬ ಯುವಕನ ವಿರುದ್ಧ ದಾವೆ ಹೂಡಿರುವ ಜಿಲ್ಲಾಧಿಕಾರಿಗಳು, ಈ ಬಗ್ಗೆ ವರದಿ ಮಾಡಿದ ಪತ್ರಕರ್ತನ ವಿರುದ್ಧವೇಕೆ ದೂರು ದಾಖಲಿಸಿಲ್ಲ. ಇಷ್ಟರಲ್ಲೇ ತಿಳಿಯಬಹುದು ಜಿಲ್ಲಾಧಿಕಾರಿಯಲ್ಲಿರುವ ಪ್ರಜೆಗಳ ಮೇಲಿನ ಆಸಕ್ತಿ ಎಷ್ಟಿದೆ ಎಂಬುದನ್ನು ಎಂದು ಹೇಳಿದ್ದಾರೆ.
2014ರಲ್ಲಿ 208ಕ ಬ್ಯಾಚಿನ ಯುಪಿ ಕೆಡರ್ ಐಎಎಸ್ ಅಧಿಕಾರಿಯಾಗಿರುವ ಚಂದ್ರಕಲಾ ಅವರು ಕಳಪೆ ರಸ್ತೆ ಕಾಮಗಾರಿ ಮಾಡಿದ್ದಕ್ಕಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಾದ್ಯಂತ ಓಡಾಡಿತ್ತು. ವಿಡಿಯೋದಿಂದ ಚಂದ್ರಕಲಾ ಅವರು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು.
Advertisement