ನೀರಿಲ್ಲ ಎಂದು ಶಸ್ತ್ರ ಚಿಕಿತ್ಸೆ ಮುಂದೂಡಿದ ನಿಮ್ಸ್ ವೈದ್ಯರು..!

ಮುತ್ತಿನ ನಗರಿ ಹೈದರಾಬಾದಿನಲ್ಲಿ ನೀರಿಗೆ ಹಾಹಾಕಾರ ಜೋರಾಗಿದ್ದು, ನೀರಿಲ್ಲ ಎಂಬ ಒಂದೇ ಕಾರಣಕ್ಕೆ ನೈಜಾಮ್ಸ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ನಿಮ್ಸ್) ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಿದ್ದಾರೆ...
ಹೈದರಾಬಾದ್ ನಿಮ್ಸ್ ಆಸ್ಪತ್ರೆ (ಸಂಗ್ರಹ ಚಿತ್ರ)
ಹೈದರಾಬಾದ್ ನಿಮ್ಸ್ ಆಸ್ಪತ್ರೆ (ಸಂಗ್ರಹ ಚಿತ್ರ)

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದಿನಲ್ಲಿ ನೀರಿಗೆ ಹಾಹಾಕಾರ ಜೋರಾಗಿದ್ದು, ನೀರಿಲ್ಲ ಎಂಬ ಒಂದೇ ಕಾರಣಕ್ಕೆ ನೈಜಾಮ್ಸ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ನಿಮ್ಸ್)  ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಿದ್ದಾರೆ.

ಮೂಲಗಳ ಪ್ರಕಾರ ಹೈದರಾಬಾದ್ ನಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರದಿಂದ ನೀರಿಗೆ ಹಾಹಾಕಾರ ಶುರುವಾಗಿದ್ದು, ಖಾಸಗಿ ಟ್ಯಾಂಕರ್ ಮೂಲಕವಾಗಿ ಆಸ್ಪತ್ರೆಗೆ ನೀರು ಸರಬರಾಜು  ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಈ ನೀರು ಆಸ್ಪತ್ರೆಯ ಕನಿಷ್ಠ ಸೌಲಭ್ಯಗಳಿಗೂ ಸಾಲುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ನಡೆಯಬೇಕಿದ್ದ ಸುಮಾರು 30 ಅಧಿಕ ಶಸ್ತ್ರಚಿಕಿತ್ಸೆಗಳನ್ನು ವೈದ್ಯರು  ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್ ನಿಮ್ಸ್ ಆಸ್ಪತ್ರೆಯಲ್ಲಿ 1500 ರೋಗಿಗಗಳು ಮತ್ತು 2000 ಆಸ್ಪತ್ರೆ ಸಿಬ್ಬಂದಿಗಳಿದ್ದು, ಪ್ರತಿನಿತ್ಯ 2000ಕ್ಕೂ ಅಧಿಕ ಹೋರರೋಗಿಳು ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ.  ಇವಿಷ್ಟೂ ಮಂದಿಗೆ ಸರಿಹೋಗುವಷ್ಟು ಪ್ರಮಾಣದಲ್ಲಿ ನೀರು ಆಸ್ಪತ್ರೆಗೆ ಸರಬರಾಜಾಗುತ್ತಿಲ್ಲ. ಅಲ್ಲದೆ ಹೈದಾರಾಬಾದ್ ನ ಪ್ರಮುಖ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಪ್ರಮುಖ ವಾಲ್ವ್  ಒಂದು ಕೆಟ್ಟು ನಿಂತಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಹೀಗಾಗಿ ನಿಮ್ಸ್ ಆಸ್ಪತ್ರೆಗೆ ಸರಬರಾಜಾಗಬೇಕಿದ್ದ ನೀರು  ಸ್ಥಗಿತಗೊಂಡಿದೆ.

"ಭಾನುವಾರ ಬೆಳಗ್ಗೆಯೇ ಆಸ್ಪತ್ರೆಗೆ ಬರುತ್ತಿದ್ದ ನೀರು ಸ್ಥಗಿತಗೊಂಡಿದ್ದು, ಸಂಗ್ರಹವಾಗಿದ್ದ ನೀರು ಭಾನುವಾರ ಮಧ್ಯಾಹ್ನಕ್ಕೆ ಖಾಲಿಯಾಗಿದೆ. ಇನ್ನು ಕುಡಿಯುವುದಕ್ಕಾಗಿ ಖಾಸಗಿಯವರಿಂದ  ದುಬಾರಿ ಹಣ ತೆತ್ತು ನೀರು ಪಡೆಯಲಾಗುತ್ತಿದೆಯಾದರೂ, ಶಸ್ತ್ರಚಿಕಿತ್ಸೆಗೆ ಬೇಕಾಗುವಷ್ಟು ನೀರನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸಾ ವೇಳಾಪಟ್ಟಿಯನ್ನು  ಮುಂದೂಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com