ಅಫ್ಜಲ್ ಗುರು ಗಲ್ಲಿಗೆ ಮೂರು ವರ್ಷ; ಶ್ರೀನಗರದಲ್ಲಿ ಬಂದ್ ಆಚರಣೆ

ಸಂಸತ್ ಭವನ ಮೇಲಿನ ದಾಳಿಯ ಪ್ರಮುಖ ರುವಾರಿ ಉಗ್ರ ಅಫ್ಜಲ್ ಗುರು ಸಾವನ್ನಪ್ಪಿ ಇಂದಿಗೆ ಮೂರು ವರ್ಷಕಳೆದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀನಗರದಾದ್ಯಂತ ಬಂದ್ ಆಚರಿಸಲಾಗುತ್ತಿದೆ...
ಅಫ್ಜಲ್ ಗುರು ಗಲ್ಲಿಗೆ ಮೂರು ವರ್ಷ; ಶ್ರೀನಗರದಲ್ಲಿ ಬಂದ್ ಆಚರಣೆ (ಸಾಂದರ್ಭಿಕ  ಚಿತ್ರ)
ಅಫ್ಜಲ್ ಗುರು ಗಲ್ಲಿಗೆ ಮೂರು ವರ್ಷ; ಶ್ರೀನಗರದಲ್ಲಿ ಬಂದ್ ಆಚರಣೆ (ಸಾಂದರ್ಭಿಕ ಚಿತ್ರ)
Updated on

ಶ್ರೀನಗರ: ಸಂಸತ್ ಭವನ ಮೇಲಿನ ದಾಳಿಯ ಪ್ರಮುಖ ರುವಾರಿ ಉಗ್ರ ಅಫ್ಜಲ್ ಗುರು ಸಾವನ್ನಪ್ಪಿ ಇಂದಿಗೆ ಮೂರು ವರ್ಷಕಳೆದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀನಗರದಾದ್ಯಂತ ಬಂದ್ ಆಚರಿಸಲಾಗುತ್ತಿದೆ.

ಬಂದ್ ಪರಿಣಾಮ ಈಗಾಗಲೇ ಶ್ರೀನಗರದ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ವ್ಯಾಪಾರ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಲ್ಲದೆ ರಸ್ತೆಗಳು ಕೂಡ ವಾಹನಗಳಲ್ಲದೆ ನಿಶ್ಯಬ್ಧವಾಗಿದೆ. ರಸ್ತೆಗಳ ಜನರ ಓಡಾಟಗಳೂ ಅತ್ಯಂತ ವಿರಳವಾಗಿರುವುದರಿಂದ ಸಾರ್ವಜನಿಕ ವಾಹನಗಳು ರಸ್ತೆಗಳಲ್ಲಿ ಕಣ್ಮರೆಯಾಗಿವೆ.

ಅಫ್ಜಲ್ ಗುರು ಗಲ್ಲು ಶಿಕ್ಷೆಗೆ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸಿಕೊಂಡು ಬಂದಿರುವ ಪ್ರತ್ಯೇಕತಾವಾದಿಗಳು ಕೂಡ ಇದೀಗ ಜಮ್ಮು ಮತ್ತು ಕಾಶ್ಮೀರದಾದ್ಯಂತ ಬಂದ್ ಗೆ ಕರೆ ನೀಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ನಾಳೆಯೂ ಕೂಡಿ ಮುಂದುರೆಯಲಿದೆ ಎಂದು ಹೇಳಲಾಗುತ್ತಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಅಲ್ಲಿನ ಸರ್ಕಾರ ಯಾವುದೇ ಅಹಿತಕರ ಘಟನೆ ನಡೆದಂತೆ ಸೇನಾ ಪಡೆಗಳು ಹಾಗೂ ಪೊಲೀಸರನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನೇಮಿಸಿದೆ.

2001ರಲ್ಲಿ ಸಂಸತ್ ಭವನದ ಮೇಲೆ 100ಕ್ಕೂ ಅಧಿಕ ಸಂಸದರಿದ್ದ ಸಮಯದಲ್ಲೇ ಭವನದ ಮೇಲೆ ಅತ್ಯಾಧುನಿಕ ಶಸ್ತ್ರಸಜ್ಜಿತರಾದ 5 ಪಾಕಿಸ್ತಾನಿ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಉಗ್ರರು ಮನಸೋ ಇಚ್ಛೆ ಹಾರಿಸಿದ ಗುಂಡಿಗೆ ಭದ್ರತಾ ಸಿಬ್ಬಂದಿಗಳು ಸೇರಿದಂತೆ 9 ಜನರು ಬಲಿಯಾಗಿದ್ದರು. ಭಾರತೀಯ ಸೇನಾಪಡೆ ಎಲ್ಲಾ ಉಗ್ರರನ್ನು ಹೊಡೆದುರುಳಿಸಿದ್ದರು. ಈ ದಾಳಿಯ ರೂವಾರಿ ಅಫ್ಜಲ್ ಗುರುವಾಗಿದ್ದ.

ಸಂಸತ್ ಭವನದ ಮೇಲೆ ನಡೆದ ದಾಳಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಅಫ್ಡಲ್ ಗುರುಗೆ 2002 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಫ್ಜಲ್ ಸುಪ್ರೀಂ ಕೋರ್ಟ್ ಮೇಟಿಲೇರಿದ್ದ. 2005ರಲ್ಲಿ ಸುಪ್ರೀಂ ಕೋರ್ಟ್ ಕೂಡ ಕೆಳ ನ್ಯಾಯಾಲಯದ ತೀರ್ಪು ಎತ್ತಿಹಿಡಿದಿತ್ತು. ನಂತರ 2006ರ ಅಕ್ಟೋಬರ್‌ನಲ್ಲಿ ಅಫ್ಜಲ್‌ಗೆ ಗಲ್ಲು ಶಿಕ್ಷೆ ವಿಧಿಸಲು ದಿನಾಂಕ ನಿಗದಿ ಕೂಡ ಮಾಡಲಾಗಿತ್ತು. ಆದರೆ ಅಫ್ಜಲ್ ಪತ್ನಿ ಕ್ಷಮಾಧಾನ ಅರ್ಜಿ ಸಲ್ಲಿಸಿದ ಪರಿಣಾಮ ಶಿಕ್ಷೆಯನ್ನು ಮುಂದೂಡಲಾಗಿತ್ತು. ಇದರಂತೆ 2013ರ ಫೆ.9 ರಂದು ಅಫ್ಬಲ್ ಗುರುವಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com