ದಟ್ಟ ಮಂಜಿನಿಂದಾಗಿ ಹರ್ಯಾಣದಲ್ಲಿ ಸರಣಿ ಅಪಘಾತ: 4 ಸಾವು

ದಟ್ಟ ಮಂಜಿನಿಂದಾಗಿ ಹರ್ಯಾಣದ ಹೆದ್ದಾರಿಯಲ್ಲಿ ಮೂವತ್ತು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ....
ಅಪಘಾತ
ಅಪಘಾತ
Updated on: 

ನವದೆಹಲಿ: ದಟ್ಟ ಮಂಜಿನಿಂದಾಗಿ ಹರ್ಯಾಣದ ಹೆದ್ದಾರಿಯಲ್ಲಿ ಮೂವತ್ತು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದಟ್ಟ ಮಂಜಿನಿಂದಾಗಿ ಇಂದು ಬೆಳಗ್ಗೆ ಈ ಸರಣಿ ಅಪಘಾತ ಸಂಭವಿಸಿದೆ. ಲಾರಿಯೊಂದರ ಬ್ರೇಕ್ ಡೌನ್ ಆಗಿ ರಸ್ತೆ ಮಧ್ಯೆದಲ್ಲೇ ನಿಲ್ಲುತ್ತದೆ. ಈ ವೇಳೆ ಹಿಂದಿನಿಂದ ಬಂದ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆಯುತ್ತದೆ. ತದ ನಂತರ 30-40 ಕಾರುಗಳು ಹಿಂದೊಂದರಂತೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ ಎಂದು ಹೈವೇ ಪೊಲೀಸ್ ಮುಖ್ಯಸ್ಥ ಮನೋಜ್ ಕುಮಾರ್ ಹೇಳಿದ್ದಾರೆ.

ಸರಣಿ ಅಪಘಾತದಲ್ಲಿ 30 ಕಾರುಗಳು ಸಂಪೂರ್ಣ ಜಕಂಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com