ಬ್ರಾಹ್ಮಣ ಯುವತಿಗೆ ರು.5 ಲಕ್ಷ, ಸಿಖ್ ಹುಡುಗಿಗೆ ರು.7 ಲಕ್ಷ: ಗುಜರಾತಿನಲ್ಲೊಂದು 'ಲವ್ ಜಿಹಾದ್'

ವಿವಾದಿತ ಲವ್ ಜಿಹಾದ್ ವಿಷಯ ಇದೀಗ ಗುಜರಾತ್ ರಾಜ್ಯದಲ್ಲಿ ತಲ್ಲಣ ಸೃಷ್ಟಿ ಮಾಡಿದೆ. ವಾಟ್ಸಾಪ್ ನಲ್ಲಿ...
ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಲವ್ ಜಿಹಾದ್ ಗೆ ಸಂಬಂಧಪಟ್ಟ ಸಂದೇಶ
ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಲವ್ ಜಿಹಾದ್ ಗೆ ಸಂಬಂಧಪಟ್ಟ ಸಂದೇಶ
Updated on: 

ಅಹಮದಾಬಾದ್: ವಿವಾದಿತ ಲವ್ ಜಿಹಾದ್ ವಿಷಯ ಇದೀಗ ಗುಜರಾತ್ ರಾಜ್ಯದಲ್ಲಿ  ತಲ್ಲಣ ಸೃಷ್ಟಿ ಮಾಡಿದೆ. ವಾಟ್ಸಾಪ್ ನಲ್ಲಿ ಸಂದೇಶವೊಂದು ಹರಿದಾಡುತ್ತಿದ್ದು, ಅದರಲ್ಲಿ ಮುಸ್ಲಿಂ ಯುವಕರು ಬೇರೆ ಧರ್ಮಗಳ ಹುಡುಗಿಯರನ್ನು ಮದುವೆಯಾದರೆ ನಗದು ಬಹುಮಾನ ನೀಡಲಾಗುವುದು ಎಂಬುದಿದೆ.

ಈ ಸಂದೇಶವನ್ನು ' ಸ್ಟೂಡೆಂಟ್ಸ್ ಆಫ್ ಮುಸ್ಲಿಂ ಯೂತ್ ಫೋರಮ್'' ವಾಟ್ಸಾಪ್ ನಲ್ಲಿ ರವಾನಿಸುತ್ತಿದೆ. ಮುಸ್ಲಿಂ ಯುವಕರು ಬೇರೆ ಧರ್ಮದ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ ನಗದು ಬಹುಮಾನ ನೀಡಲಾಗುವುದು ಎಂಬ ಸಂದೇಶ ವಾಟ್ಸಾಪ್ ನಲ್ಲಿ ಹರಡುತ್ತಿರುವುದು ಮುಸ್ಲಿಂ ಯುವಕರನ್ನು ಆಕರ್ಷಿಸುತ್ತಿದ್ದು, ಲವ್ ಜಿಹಾದ್ ಗೆ ಬೆಂಬಲ ನೀಡಿದಂತಾಗಿದೆ.

ಸಂದೇಶದ ಸಾರಾಂಶ ಹೀಗಿದೆ: ಮುಸ್ಲಿಂ ಯುವಕ ಹಿಂದೂ ಬ್ರಾಹ್ಮಣ ಹುಡುಗಿಯನ್ನು ಮದುವೆಯಾದರೆ ಅವನಿಗೆ 5 ಲಕ್ಷ ರೂಪಾಯಿ, ಸಿಖ್ ಯುವತಿಯನ್ನು ಮದುವೆ ಮಾಡಿಕೊಂಡರೆ 7 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು''. ಹುಡುಗಿ ಕ್ಷತ್ರಿಯ ಹಿಂದೂ ಸಮುದಾಯದವಳಾಗಿದ್ದರೆ ಮದುವೆಯಾದ ಮುಸ್ಲಿಂ ಯುವಕನಿಗೆ ನಾಲ್ಕೂವರೆ ಲಕ್ಷ ರೂಪಾಯಿ ಸಿಗುತ್ತದೆ. ಗುಜರಾತಿ ಬ್ರಾಹ್ಮಣರ ಹುಡುಗಿಯನ್ನು ಮದುವೆಯಾದರೆ 6 ಲಕ್ಷ, ಪಂಜಾಬಿ ಹುಡುಗಿಗೆ 6 ಲಕ್ಷ, ಕ್ರಿಸ್ತಿಯನ್ ರೋಮನ್ ಕ್ಯಾಥೋಲಿಕ್ ಯುವತಿಯನ್ನು ಪ್ರೀತಿಸಿ ವರಿಸಿದರೆ 4 ಲಕ್ಷ ರೂಪಾಯಿ, ಕ್ರಿಸ್ತಿಯನ್ ಪ್ರೊಟೆಸ್ಟೆಂಟ್ ಆದರೆ 3 ಲಕ್ಷ, ಜೈನ್ ಹುಡುಗಿಗೆ 3 ಲಕ್ಷ ಹಾಗೂ ಗುಜರಾತಿನ ಕಚ್ ಯುವತಿಯನ್ನು ಮದುವೆಯಾದರೆ 3 ಲಕ್ಷ ರೂಪಾಯಿ ಬಹುಮಾನ ಸಿಗುತ್ತದೆ ಎಂದು ಸಂದೇಶದಲ್ಲಿದೆ.

ಇನ್ನು ಬೇರೆ ಧರ್ಮದ ಯುವತಿಯನ್ನು ಮದುವೆಯಾದ ಮುಸಲ್ಮಾನ ಯುವಕರು ಎಲ್ಲಿಂದ ನಗದು ಬಹುಮಾನ ಸ್ವೀಕರಿಸಬೇಕು ಎಂದು ನಾಲ್ಕು ವಿಳಾಸಗಳನ್ನು ನೀಡಲಾಗಿದೆ. ಮತ್ತು 11 ದೂರವಾಣಿ ಸಂಖ್ಯೆಗಳನ್ನು ಕೂಡ ನೀಡಲಾಗಿದೆ.

ಇಂತಹ ಸಂದೇಶಗಳನ್ನು ಜನರು ಕಡೆಗಣಿಸಬೇಕು ಮತ್ತು ತಮ್ಮ ಮೊಬೈಲ್ ಗೆ ಇಂತಹ ಸಂದೇಶಗಳು ಬಂದರೆ ಕೂಡಲೇ ಪೊಲೀಸರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದು ವಡೋದರಾ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com