ದಶಕಗಳ ಯೋಜನೆ ಹುಬ್ಬಳ್ಳಿ-ಅಂಕೋಲ ರೈಲಿಗೆ ಗ್ರೀನ್ ಸಿಗ್ನಲ್

ದಶಕಗಳ ಹಿಂದಿನಿಂದಲೂ ನೆನೆಗುದಿಗೆ ಬಿದ್ದಿದ್ದ ವಿವಾದಿತ ಹುಬ್ಬಳ್ಳಿ-ಅಂಕೋಲಾ ನಡುವಿನ ಪ್ರಸ್ತಾವಿತ ರೈಲು ಮಾರ್ಗ ನಿರ್ಮಾಣ ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ (ಎನ್ ಜಿಟಿ) ನ್ಯಾಯಾಧೀಕರಣ ಅಸ್ತು ಎಂದಿದೆ...
ದಶಕಗಳ ಯೋಜನೆ ಹುಬ್ಬಳ್ಳಿ-ಅಂಕೋಲ ರೈಲಿಗೆ ಗ್ರೀನ್ ಸಿಗ್ನಲ್
ದಶಕಗಳ ಯೋಜನೆ ಹುಬ್ಬಳ್ಳಿ-ಅಂಕೋಲ ರೈಲಿಗೆ ಗ್ರೀನ್ ಸಿಗ್ನಲ್
Updated on
ನವದೆಹಲಿ: ದಶಕಗಳ ಹಿಂದಿನಿಂದಲೂ ನೆನೆಗುದಿಗೆ ಬಿದ್ದಿದ್ದ ವಿವಾದಿತ ಹುಬ್ಬಳ್ಳಿ-ಅಂಕೋಲಾ ನಡುವಿನ ಪ್ರಸ್ತಾವಿತ ರೈಲು ಮಾರ್ಗ ನಿರ್ಮಾಣ ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ (ಎನ್ ಜಿಟಿ) ನ್ಯಾಯಾಧೀಕರಣ ಅಸ್ತು ಎಂದಿದೆ. 
ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗವು ಜೀವವೈವಿಧ್ಯತೆಯನ್ನು ಹೊಂದಿರುವ ಸೂಕ್ಷ್ಮ ತಾಣವಾದ ಪಶ್ಚಿಮ ಘಟ್ಟಕ್ಕೆ ಸಮಸ್ಯೆಯನ್ನೊಡ್ಡಲಿದೆ ಎಂದು ಹೇಳಿ ಪರಿಸರ ಪ್ರೇಮಿಗಳು ಈ ಯೋಜನೆಗೆ ಹಲವು ವಿರೋಧಗಳನ್ನು ವ್ಯಕ್ತಪಡಿಸಿದ್ದರು. ಈ ಯೋಜನೆ ಕಾರ್ಯಗತವಾದರೆ ಉತ್ತರ ಕರ್ನಾಟಕದ ಭಾಗದ ಜನರಿಗೆ ಉತ್ತಮ ಅವಕಾಶಗಳು ಸಿಗಲಿದೆ ಹಾಗೂ ಜನರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಉದ್ಯಮಿಗಳು ಹಾಗೂ ಅಧಿಕಾರಿಗಳು ತಮ್ಮ ವಾದವನ್ನು ಮಂಡಿಸಿದ್ದರು. 
1998ರಿಂದಲೂ ಈ ವಿವಾದ ನೆಲಕಚ್ಚಿಕೊಂಡಿತ್ತು. ಬಳ್ಳಾರಿ-ಹೊಸಪೇಟೆ ಗಣಿಗಳಿಂದ ಕಬ್ಬಿಣದ ಅದಿರು ಸಾಗಿಸುವ ನಿಟ್ಟಿನಲ್ಲಿ 168 ಕಿ.ಮೀ.ದೂರದ ಈ ರೈಲೂ ಮಾರ್ದ ಕುರಿತಂತೆ ವರದಿ ಸಲ್ಲಿಸಲು ಸರ್ವೋಚ್ಛ ನ್ಯಾಯಾಲಯ ಕಳೆದ ವರ್ಷ ಕೇಂದ್ರ ಸಬಲೀಕರಣ ಸಮಿತಿ (ಸಿಇಸಿ) ರಚಿಸಿದ್ದ ಹಿನ್ನೆಲೆಯಲ್ಲಿ ಇದೀಗ ಹಸಿರು ಪೀಠ ನೀಡಿರುವ ಈ ಆದೇಶ ಮಹತ್ವವನ್ನು ಪಡೆದುಕೊಂಡಿದೆ. 
ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಯನ್ನಾಗಿ ಪರಿವರ್ತಿಸಲು ಅರ್ಜಿಸಲ್ಲಿಸಬೇಕು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ರಾಜ್ಯ ಸರ್ಕಾರ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಪೂರ್ವಾನುಮತಿಯೊಂದಿಗೆ ಈ ಬಗ್ಗೆ ಆದೇಶ ನೀಡಬೇಕು ಎಂದು ಪೀಠ ಆದೇಶ ನೀಡಿದೆ. ಅಲ್ಲದೆ, ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಗೆ ರೈಲ್ವೆ ಇಲಾಖೆ ಕೈಗೊಳ್ಳಲು ಉದ್ದೇಶಿಸಿದ್ದ ಯೋಜನೆಗೆ ತಡೆ ವಿಧಿಸಲು ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ. ಇದರಂತೆ ಪೀಠ ನೀಡಿರುವ ಆದೇಶ ಅನ್ವಯ ಯೋಜನೆಗೆ ಈ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರ ಮುಂದಿನ ಕಾರ್ಯ ಕೈಗೊಳ್ಳಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com