ಸಿಪಿಎಂ-ಆರ್ಎಸ್ಎಸ್ ಘರ್ಷಣೆ ವೇಳೆ ಗಾಯಗೊಂಡಿದ್ದ ಕಾರ್ಯಕರ್ತ ಸಾವು

ಕೆಲವು ದಿನಗಳ ಹಿಂದಷ್ಟೇ ಚೆರ್ತಾಳದ ಪಲ್ಲಿಪುರಂನಲ್ಲಿ ಸಿಪಿಎಂ ಹಾಗೂ ಆರ್ಎಸ್ಎಸ್ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಸಿಪಿಎಂ ಕಾರ್ಯಕರ್ತ ಬುಧವಾರ ಸಾವನ್ನಪ್ಪಿದ್ದಾರೆ...
ಸಿಪಿಎಂ-ಆರ್ಎಸ್ಎಸ್ ಘರ್ಷಣೆ ವೇಳೆ ಗಾಯಗೊಂಡಿದ್ದ ಕಾರ್ಯಕರ್ತ ಸಾವು
ಸಿಪಿಎಂ-ಆರ್ಎಸ್ಎಸ್ ಘರ್ಷಣೆ ವೇಳೆ ಗಾಯಗೊಂಡಿದ್ದ ಕಾರ್ಯಕರ್ತ ಸಾವು
Updated on: 
ಆಲಪುಳ: ಕೆಲವು ದಿನಗಳ ಹಿಂದಷ್ಟೇ ಚೆರ್ತಾಳದ ಪಲ್ಲಿಪುರಂನಲ್ಲಿ ಸಿಪಿಎಂ ಹಾಗೂ ಆರ್ಎಸ್ಎಸ್ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಸಿಪಿಎಂ ಕಾರ್ಯಕರ್ತ ಬುಧವಾರ ಸಾವನ್ನಪ್ಪಿದ್ದಾರೆ. 
ಶಿಬು (25) ಸಾವನ್ನಪ್ಪಿದ್ದ ಸಿಪಿಎಂ ಕಾರ್ಯಕರ್ತನಾಗಿದ್ದು, ಘರ್ಷಣೆ ವೇಳೆ ಗಾಯಗೊಂಡು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋಗಿದ್ದರು.
ಆದರೆ, ಮನೆಗೆ ಹೋದ ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಸಾವಿಗೆ ಘರ್ಷಣೆ ವೇಳೆ ಬಿದ್ದಿದ್ದ ಗಂಭೀರ ಗಾಯಗಳೇ ಕಾರಣ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com