ಪಿಒಕೆ ಸೇರಿದಂತೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಬ್ರಿಟನ್ ಸಂಸದ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬ್ರಿಟನ್ ಸಂಸದ ರಾಬರ್ಟ್ ಜಾನ್ ಬ್ಲಾಕ್ಮನ್ ಹೇಳಿದ್ದಾರೆ.
ರಾಬರ್ಟ್ ಜಾನ್ ಬ್ಲಾಕ್ಮನ್
ರಾಬರ್ಟ್ ಜಾನ್ ಬ್ಲಾಕ್ಮನ್
Updated on: 

ಜಮ್ಮು: ಪಾಕ್ ಆಕ್ರಮಿತ ಕಾಶ್ಮೀರವೂ(ಪಿಒಕೆ) ಸೇರಿದಂತೆ ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬ್ರಿಟನ್ ಸಂಸದ ರಾಬರ್ಟ್ ಜಾನ್ ಬ್ಲಾಕ್ಮನ್ ಹೇಳಿದ್ದಾರೆ.
ಜಮ್ಮು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬ್ಲಾಕ್ಮನ್, ಜಮ್ಮು-ಕಾಶ್ಮೀರ ಪುನಾರಚನೆಯಾಗಬೇಕಿದ್ದು, ಪಾಕಿಸ್ತಾನದಿಂದ ಅಕ್ರಮವಾಗಿ ನಿಯಂತ್ರಿಸಲ್ಪಡುತ್ತಿರುವ ಪ್ರದೇಶವೂ ಸೇರಿದಂತೆ ಸಂಪೂರ್ಣ ಜಮ್ಮು-ಕಾಶ್ಮೀರ ಭಾರತದ ಪರಮಾಧಿಕಾರಕ್ಕೆ ಒಳಪಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.  ಸ್ವಾತಂತ್ರ್ಯ ನಂತರ ಜಮ್ಮು- ಕಾಶ್ಮೀರದ ಮಹಾರಾಜ ತನ್ನ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸಲು ಒಪ್ಪಿ ಸಹಿ ಹಾಕಿದ್ದರು. ಆದರೆ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದ್ದು, ಮಾತುಕತೆ ಮೂಲಕ ಪಾಕಿಸ್ತಾನ ಅದನ್ನು ಭಾರತಕ್ಕೆ ವಾಪಸ್ ನೀಡಬೇಕು ಎಂದು  ಬ್ಲಾಕ್ಮನ್ ಹೇಳಿದ್ದಾರೆ. 
ಇಂಗ್ಲೆಂಡ್ ನ ಹ್ಯಾರೋ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬ್ಲಾಕ್ಮನ್, ಈ ಹಿಂದೆ ಬ್ರಿಟನ್ ಸಂಸತ್ ನಲ್ಲಿ ಪಾಕಿಸ್ತಾನದ ಪರ ಲಾಭಿ ನಡೆಯುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ, ಭಾರತ ಸ್ನೇಹಿ ಬ್ರಿಟನ್ ಸಂಸದರು ಈಗ ಭಾರತದ ಪರವಾಗಿ ನಿಂತಿದ್ದಾರೆ ಎಂದು ಜಾನ್ ಬ್ಲಾಕ್ಮನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com