ರೂರ್ಕೆಲಾ ಪ್ರದೇಶದಲ್ಲಿ ನಿನ್ನೆಯಷ್ಟೇ ಬಂಧಿತರಾಗಿದ್ದ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ) ಇದೀಗ 2014ರಲ್ಲಿ ಚೆನ್ನೈನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮ್ಮ ಕೈವಾಡವಿರುವುದಾಗಿ ಗುರುವಾರ ಒಪ್ಪಿಕೊಂಡಿದ್ದಾರೆ...
ಚೆನ್ನೈ: ರೂರ್ಕೆಲಾ ಪ್ರದೇಶದಲ್ಲಿ ನಿನ್ನೆಯಷ್ಟೇ ಬಂಧಿತರಾಗಿದ್ದ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ) ಇದೀಗ 2014ರಲ್ಲಿ ಚೆನ್ನೈನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮ್ಮ ಕೈವಾಡವಿರುವುದಾಗಿ ಗುರುವಾರ ಒಪ್ಪಿಕೊಂಡಿದ್ದಾರೆ.
ಬಂಧಿತರಾಗಿದ್ದ ಸಿಮಿ ಉಗ್ರರನ್ನು ಕೇಂದ್ರ ತನಿಖಾ ತಂಡ ವಿಚಾರಣೆಗೊಳಪಡಿಸಿತ್ತು. ವಿಚಾರಣೆ ವೇಳೆ ಉಗ್ರರು ಚೆನ್ನೈನ ಗುವಾಹಟಿ-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸ್ಫೋಟದ ಹಿಂದೆ ತಮ್ಮ ಸಂಘಟನೆ ಸದಸ್ಯರಾದ ಜಾಕೀರ್ ಹುಸೇನ್ ಮತ್ತು ಎಂ.ಡಿ. ಅಜಾದುದ್ದೀನ್ ಎಂಬುವವರು ಇದ್ದರು ಎಂದು ಹೇಳಿದ್ದಾರೆ. ಆದರೆ ಪಾಟ್ನ ಸ್ಫೋಟದ ಹಿಂದೆ ತಮ್ಮ ಕೈವಾಡಿವಿರುವ ಕುರಿತಂತೆ ತಮ್ಮ ಪಾತ್ರವಿದೆ ಎಂಬುದನ್ನು ತಿರಸ್ಕರಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಚಾರಣೆ ಕುರಿತಂತೆ ಮಾಹಿತಿ ನೀಡಿರುವ ಸಾರಂಗಿ ಅವರು, ಸಿಮಿ ಉಗ್ರರು ತಮ್ಮ ಚುಟುವಟಿಕೆಗಳಿಗೆ ನಾಲ್ಕು ಪ್ರದೇಶಗಳನ್ನು ಬಳಸಿಕೊಳ್ಳುತ್ತಿದ್ದು, ಉಗ್ರರು ನೀಡಿರುವ ಮಾಹಿತಿ ಪ್ರಕಾರ ಆ ನಾಲ್ಕು ಪ್ರದೇಶಗಳು ಜಮ್ಶೆದ್ಪುರ, ರಾಂಚಿ, ಭಾದ್ರಾಕ್ ಮತ್ತು ರೂರ್ಕೆಲಾ ಪ್ರದೇಶವೆಂದು ತಿಳಿದುಬಂದಿದೆ.
ಉಗ್ರರು ನೀಡಿರುವ ಮಾಹಿತಿ ಪ್ರಕಾರ ಭಾದ್ರಾಕ್ ನಲ್ಲಿರುವ ಉಗ್ರರು ಅಲ್ಲಿ 7-8 ದಿನಗಳ ಕಾಲ ಉಳಿದುಕೊಂಡಿದ್ದು, ತಿಂಗಳ ಹಿಂದಷ್ಟೇ ಅಲ್ಲಿನ ಭೂ ಮಾಲೀಕರ ಬಳಿ ನಾಜ್ಮಾ ಚಿಕಿತ್ಸೆ ಕುರಿತಂತೆ ಮಾತನಾಡಿದ್ದಾರೆ. ಇದರಂತೆ ಉಗ್ರರು ಉಗ್ರರು ಭಾದ್ರಾಕ್ ನಿಂದ ರೂರ್ಕೆಲಾ ಪ್ರದೇಶದಕ್ಕೆ ನೇರವಾಗಿ ಹೋಗಿರುವ ಸಾಧ್ಯಗಳಿಲ್ಲ. ರಾಂಚಿ ಮೂಲಕ ಹೋಗಿರಬಹುದು ಎಂದು ಹೇಳಿದ್ದಾರೆ.
ಇದಲ್ಲದೆ ಉಗ್ರರ ಗುಂಪು ಚಂಡೀಗಢವನ್ನು ಲೂಟಿ ಮಾಡಲು ಅವಕಾಶವನ್ನು ಹುಡುಕುತ್ತಿದ್ದು, ಚಂಡೀಗಢದ ನಂತರ ಭಾದ್ರಾಕ್ ಅಥವಾ ರಾಂಚಿಗೆ ಹೋಗುವ ಸಾಧ್ಯತೆಗಳಿವೆ. ಭಾದ್ರಾಕ್ ಪ್ರದೇಶದಲ್ಲಿ ಈಗಾಗಲೇ ಉಗ್ರರ ಕೆಲವು ದಾಖಲೆಗಳು ಹಾಗೂ ಮೊಬೈಲ್ ಫೋನ್ ಗಳು ಲಭ್ಯವಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಬಂಧಿತರಾಗಿರುವ ಉಗ್ರರ ವಿಚಾರಣೆಯನ್ನು ಅಪರಾಧ ವಿಭಾಗದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಈಗಾಗಲೇ ರೂರ್ಕೆಲಾ ಪ್ರದೇಶದಲ್ಲಿ 8 ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
2015ರ ಏಪ್ರಿಲ್ 4 ರಂದು ಚೆನ್ನೈ ಸ್ಫೋಟದ ಹಿಂದೆ ಇದ್ದಾರೆಂದು ಉಗ್ರರು ಹೇಳುತ್ತಿರುವ ಅಜಾಜುದ್ದೀನ್ ಹಾಗೂ ಎಂ.ಡಿ.ಅಸ್ಲಾಂ ಉಗ್ರರನ್ನು ತೆಲಂಗಾಣದ ನಲಗೊಂಡದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು.
ಒಡಿಶಾದ ರೂರ್ಕೆಲಾ ಪ್ರದೇಶದಲ್ಲಿ ಅಡಗಿಕುಳಿತಿದ್ದ ಉಗ್ರರನ್ನು ಪೊಲೀಸರು, ಭದ್ರತಾ ಸಿಬ್ಬಂದಿಗಳು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಸೇರಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ನಾಲ್ವರು ಉಗ್ರರನ್ನು ಬಂಧನಕ್ಕೊಳಪಡಿಸಲಾಗಿತ್ತು. ನಾಲ್ವರು ಉಗ್ರರನ್ನು ಎಸ್.ಕೆ.ಮೊಹಬೂಬ್, ಅಮ್ಜದ್ ಖಾನ್, ಜಾಕೀರ್ ಹುಸೇನ್ ಮತ್ತು ಎಂ.ಡಿ.ಸಲೇಕ್ ಎಂದು ಗುರ್ತಿಸಲಾಗಿದೆ.