9 ಒಪ್ಪಂದಗಳಿಗೆ ಭಾರತ-ನೇಪಾಳ ಪ್ರಧಾನಿಗಳ ಸಹಿ

ಆರುದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಭಾರತದೊಂದಿಗೆ 9 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ನೇಪಾಳ ಪ್ರಧಾನಿ- ಪ್ರಧಾನಿ ನರೇಂದ್ರ ಮೋದಿ ಸಂಗ್ರಹ ಚಿತ್ರ
ನೇಪಾಳ ಪ್ರಧಾನಿ- ಪ್ರಧಾನಿ ನರೇಂದ್ರ ಮೋದಿ ಸಂಗ್ರಹ ಚಿತ್ರ

ನವದೆಹಲಿ: ಆರುದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಭಾರತದೊಂದಿಗೆ 9 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಖಡ್ಗ ಪ್ರಸಾದ್ ಶರ್ಮ ಓಲಿ, ಭೂಕಂಪದ ನಂತರ ನೇಪಾಳಕ್ಕೆ ಭಾರತ ಸರ್ಕಾರ ನೀಡಿದ್ದ 250 ಮಿಲಿಯನ್ ಡಾಲರ್ ಮೊತ್ತದ ನೆರವಿನ ಬಳಕೆ, ನೇಪಾಳ ನ ಟೆರೈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯ ಸುಧಾರಣೆ, ಸಾಂಸ್ಕೃತಿಕ ಸಹಕಾರ, ನೇಪಾಳ ಮತ್ತು ಬಾಂಗ್ಲಾದೇಶ ನಡುವೆ ಸಾರಿಗೆ ವ್ಯವಸ್ಥೆ, ವಿಶಾಖಪಟ್ಟಣದಿಂದ ರೈಲು ಸಾರಿಗೆ ವ್ಯವಸ್ಥೆ ಸೇರಿದಂತೆ ಒಟ್ಟು 9 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ನೇಪಾಳದಲ್ಲಿ ಕೆಲ ತಿಂಗಳ ಹಿಂದೆ ಜಾರಿಗೆ ಬಂದಿದ್ದ ಸಂವಿಧಾನವನ್ನು ವಿರೋಧಿಸಿ ಅಲ್ಲಿನ ಮದೇಸಿ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆ ಭಾರತ- ನೇಪಾಳ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಿತ್ತು. ಈಗ ನೇಪಾಲದ ಪ್ರಧಾನಿ ಭಾರತದೊಂದಿಗೆ ಒಪ್ಪಂದಗಳಿಗೆ ಸಹಿಹಾಕಿ ದ್ವಿಪಕ್ಷೀಯ ಮಾತುಕತೆ ನಡೆಸಿರುವುದು ಮಹತ್ವ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com