ಇಸಿಸ್ ಶಂಕಿತ ಉಗ್ರ ಮೆಹದಿಗೆ ಜಾಮೀನು ನಿರಾಕರಣೆ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಉಗ್ರ ಸಂಘಟನೆಯ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ಗೆ...
ಮೆಹದಿ ಮಸ್ರೂರ್ ಬಿಸ್ವಾಸ್
ಮೆಹದಿ ಮಸ್ರೂರ್ ಬಿಸ್ವಾಸ್
ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಉಗ್ರ ಸಂಘಟನೆಯ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ಗೆ ಜಾಮೀನು ನೀಡಲು ರಾಷ್ಟ್ರೀಯ ತನಿಖಾ ತಂಡ(ಎನ್ ಐಎ)ನ ವಿಶೇಷ ನ್ಯಾಯಾಲಯ ನಿರಾಕರಿಸಿದೆ. 
ಮೆಹದಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸೆಷನ್ ಕೋರ್ಟ್ ಮತ್ತು ವಿಶೇಷ ಕೋರ್ಟ್, ಮೆಹದಿಗೆ ಜಾಮೀನು ನೀಡಿದರೆ ತಲೆಮರೆಸಿಕೊಳ್ಳಬಹುದು ಎಂದು ಹೇಳಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. 
ನ್ಯಾಯಾಮೂರ್ತಿ ಬಿ ಮುರಳಿಧರಾ ಪೈ ಅವರನ್ನೊಳಗೊಂಡ ಪೀಠ, ಮೆಹದಿ ಮೇಲೆ ಮಾಡಲಾಗಿರುವ ಆರೋಪವನ್ನು ಪರಿಗಣನೆಗೆ ತೆಗೆದುಕೊಂಡರೆ, ಆತನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
2014ರಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಉಗ್ರ ಸಂಘಟನೆಯ ಪರವಾಗಿ @shamiwitness ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿದ್ದ 'ಶಂಕಿತ ಉಗ್ರ' ಮೆಹದಿ ಮಸ್ರೂರ್ ಬಿಸ್ವಾಸ್ ನನ್ನು ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು. 
24 ವರ್ಷದ ಮೆಹ್ದಿ ಮಸ್ರೂರ್ ಬಿಸ್ವಾಸ್ ಮೂಲತಃ ಪಶ್ಚಿಮ ಬಂಗಾಳದ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ 'ಶಮಿ ವಿಟ್ನೆಸ್‌' ಎಂಬ ಖಾತೆಯನ್ನು ತೆರೆದಿದ್ದ ಮೆಹ್ದಿ, ಇಸಿಸ್ ಉಗ್ರಗಾಮಿ ಸಂಘಟನೆಯನ್ನು ಬೆಂಬಲಿಸಿ ಬರೆಯುತ್ತಿದ್ದನು. ಅಲ್ಲದೆ ಹಲವು ಪ್ರಚೋದನಾತ್ಮಕ ಸಂದೇಶಗಳು ಮತ್ತು ಇರಾಕ್‌ನಲ್ಲಿ ಉಗ್ರರು ವಿದೇಶಿ ಪತ್ರಕರ್ತರನ್ನು ಅಪಹರಿಸಿ ಅವರ ತಲೆಕತ್ತರಿಸುವ ವಿಡಿಯೋಗಳನ್ನು ಖಾತೆಯಲ್ಲಿ ಹಾಕುತ್ತಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com