ಈ ಗ್ರಾಮದಲ್ಲಿ ದಲಿತ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ

ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು, ದಲಿತ ವಿದ್ಯಾರ್ಥಿಗಳು ಎಂದು ತಾರತಮ್ಯ ಮಾಡುತ್ತಾರೆಂಬ ಭಯದಿಂದ ಈ ಕುಟುಂಬದವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ....
ಮಧುರೈನಲ್ಲಿರುವ ಕರುವಿತುರೈ ಯೂನಿಯನ್ ಪಂಚಾಯತ್ ಶಾಲೆ
ಮಧುರೈನಲ್ಲಿರುವ ಕರುವಿತುರೈ ಯೂನಿಯನ್ ಪಂಚಾಯತ್ ಶಾಲೆ

ಮಧುರೈ:  ಮಧುರೈ ಜಿಲ್ಲೆಯಿಂದ ಆರು ಕಿಮೀ ದೂರದಲ್ಲಿ ಸೋಲನಂದನಮ್ ಪಟ್ಟಣವಿದೆ, ಈ ಪಟ್ಟಣಕ್ಕೆ ಸೇರಿದ ಕುರುವಿತರೈ ಗ್ರಾಮದಲ್ಲಿ  ಸುಮಾರು 150 ದಲಿತ ಕುಟುಂಬಗಳಿವೆ.

ಈ ಊರಿನಲ್ಲಿ ಪಂಚಾಯಿತಿ ಶಾಲೆಯಿದೆ. ಆದರೆ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು, ದಲಿತ ವಿದ್ಯಾರ್ಥಿಗಳು ಎಂದು ತಾರತಮ್ಯ ಮಾಡುತ್ತಾರೆಂಬ ಭಯದಿಂದ ಈ ಕುಟುಂಬದವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ.

ಕೆಲ ತಿಂಗಳ ಹಿಂದೆ ದಲಿತ ಯುವಕರು ತಮಿಳು ಹಾಡೊಂದನ್ನು ಜೋರಾಗಿ ಹಾಡಿದ್ದರಿಂದ ಹಿಂದೂಗಳು ಆಕ್ರೋಶಗೊಂಡಿದ್ದರು. ಹೀಗಾಗಿ ಕಳೆದ 20 ವರ್ಷಗಳಿಂದ ದಲಿತ ವಿದ್ಯಾರ್ಥಿಗಳು ಅದೇ ಊರಿನಲ್ಲಿರುವ ಶಾಲೆಗೆ ಹೋಗದೇಸ ಕೀಮೀ ದೂರದಲ್ಲಿರುವ ಪಕ್ಕದ ಮನ್ನದಿಮಂಗಳಂ ಪಂಚಾಯತ್ ನಲ್ಲಿರುವ ಸರ್ಕಾರಿ ಶಾಲೆಗೆ ಹೋಗುತ್ತಾರೆ.

ಇನ್ನು ಮೈನ್ ರೋಡ್ ನಲ್ಲಿ ಶಾಲೆಗೆ ತೆರಳು ದಲಿತ ವಿದ್ಯಾರ್ಥಿಗಳನ್ನು ಅವಹೇಳನ ಮಾಡುವುದರಿಂದ ಇವರು ಬದಲಿ ಮಾರ್ಗದಿಂದ ಸ್ಕೂಲಿಗೆ ತೆರಳುತ್ತಾರೆ.

ಇನ್ನು ಸ್ಥಳೀಯ ಕ್ಷೌರಿಕರು ಕೂಡ ಇವರಿಗೆ ಈ ಊರಿನಲ್ಲಿ ಕ್ಷೌರ ಮಾಡುವುದಿಲ್ಲ. ಹೀಗಾಗಿ ಪಕ್ಕದ ಗ್ರಾಮಕ್ಕೆ ತೆರಳಿ ಹೇರ್ ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಬೇಕಾಗಿದೆ.

ಸರ್ಕಾರ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸೌಲಭ್ಯ ನೀಡಿದ್ದರೂ, ಶಾಲೆಯಲ್ಲಿ ಕೆಲ ಮೇಲ್ಜಾತಿ ವರ್ಗದ ಮಕ್ಕಳು ತಾರತಮ್ಯ ನೀತಿ ಅನುಸರಿಸುವುದರಿಂದ ಇಲ್ಲಿನ ಕುಟುಂಬಸ್ಥರು ತಮ್ಮ ಮಕ್ಕಳನ್ನು ತಮ್ಮ ಹಳ್ಳಿಯಲ್ಲಿರುವ ಶಾಲೆಗೆ ಕಳುಹಿಸಿತ್ತಿಲ್ಲ.

ಇನ್ನೂ ಶಾಲೆಯಲ್ಲಿ  ದಲಿತ ಸಿಬ್ಬಂದಿ ತಯಾರಿಸುವ ಬಿಸಿಯೂಟ ಸೇವಿಸಲು ಹಿಂದೂ ವಿದ್ಯಾರ್ಥಿಗಳ ಪೋಷಕರು ಬಿಡುವುದಿಲ್ಲ. ಜೊತಗೆ ಮೈದಾನದಲ್ಲಿ ಜೊತೆಯಾಗಿ ಆಟವಾಡಲು ಕೂಡ ಹಿಂದೂ ಪೋಷಕರು ಬಿಡುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com