ವಿಜಯಕಾಂತ್
ವಿಜಯಕಾಂತ್

ತಮಿಳುನಾಡು: ಪ್ರತಿಪಕ್ಷ ಸ್ಥಾನ ಕಳೆದುಕೊಂಡ ವಿಜಯಕಾಂತ್

ಡಿಎಂಡಿಕೆ ಶಾಸಕರ ರಾಜೀನಾಮೆ ಕಾರಣದಿಂದಾಗಿ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವನ್ನು ವಿಜಯಕಾಂತ್...
ಚೆನ್ನೈ: ಡಿಎಂಡಿಕೆ ಶಾಸಕರ ರಾಜೀನಾಮೆ ಕಾರಣದಿಂದಾಗಿ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವನ್ನು ವಿಜಯಕಾಂತ್ ಕಳೆದುಕೊಂಡಿದ್ದಾರೆ. 
ಡಿಎಂಡಿಕೆಯಯಲ್ಲಿ 8 ಭಿನ್ನಮತೀಯ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದ್ದರು. ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಪಿ ಧನಪಾಲ್ ಅಂಗೀಕರಿಸಿದ್ದಾರೆ. ರಾಜಿನಾಮೆ ಪರಿಣಾಮವಾಗಿ ವಿಜಯಕಾಂತ್ ವಿರೋಧ ಪಕ್ಷದ ಸ್ಥಾನಮಾನ ಮತ್ತು ಸವಲತ್ತುಗಳನ್ನು ಕಳೆದುಕೊಂಡಿದ್ದಾರೆ.
8 ಶಾಸಕರು ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಡಿಎಂಡಿಕೆ ಬಲ 28ರಿಂದ 20ಕ್ಕೆ ಇಳಿದಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಡಿಎಂಕೆ 23 ಸದಸ್ಯರನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಯಾವುದೇ ವಿರೋಧ ಪಕ್ಷಗಳು ಅಗತ್ಯ ಬಲ ಹೊಂದದೆ ಇರುವುದರಿಂದ ವಿರೋಧ ಪಕ್ಷದ ನಾಯಕನ ಸ್ಥಾನ ತೆರವಾಗಿಯೇ ಇರಲಿದೆ ಎಂದು ತಿಳಿಸಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com