

ನವದೆಹಲಿ: ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ವಕೀಲರ ವೇಷದಲ್ಲಿದ್ದವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆದರೆ, ಸ್ಥಳದಲ್ಲೇ ಇದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಶುಕ್ರವಾರ ಹೇಳಿಕೊಂಡಿದ್ದಾರೆ.
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದಾಗಿನಿಂದಲೂ ಕನ್ಹಯ್ಯ ಪ್ರಕರಣ ಸಂಬಂಧ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಇದೀಗ ಫೆ.17ರಂದು ನ್ಯಾಯಾಲಯದ ಆವರಣದಲ್ಲಿ ತನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಇದೇ ಮೊದಲು ಹೇಳಿಕೆಯೊಂದನ್ನು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದಾನೆ.
ನ್ಯಾಯಾಲಯದ ಆವರಣಕ್ಕೆ ಹೋಗುತ್ತಿದ್ದ ವೇಳೆ ವಕೀಲರ ವೇಷದಲ್ಲಿದ್ದವರು ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು. ನನ್ನ ಸುತ್ತಲೂ ಪೊಲೀಸರಿದ್ದರು. ಆದರೂ ಅವರು ಏನನ್ನೂ ಮಾಡಲಿಲ್ಲ. ಆ ಪರಿಸ್ಥಿತಿಯಲ್ಲಿ ನನಗೆ ಯಾವುದೇ ಭದ್ರತೆ ಇರಲಿಲ್ಲ. ಒಬ್ಬ ವ್ಯಕ್ತಿ ಸುತ್ತ ಹಲ್ಲೆ ನಡೆಯುವ ಗುಂಪು ಇತ್ತು. ಪ್ರವೇಶ ದ್ವಾರದ ವರೆಗೂ ನನ್ನ ಮೇಲೆ ದಾಳಿ ನಡೆಸಿದ್ದರು.
ನ್ಯಾಯಾಲಯ ಕೊಠಡಿ ಬಳಿ ನಿಂತಿದ್ದ ಪೊಲೀಸರಿಗೆ ವಕೀಲರ ವೇಷ ಧರಿಸಿ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರಿಗೆ ಬೆಟ್ಟು ಮಾಡಿ ತೋರಿಸಿದಾಗ ಪೊಲೀಸರು ಅವನು ಯಾರು, ಏನು ಎಂಬೆಲ್ಲಾ ಮಾಹಿತಿಗಳನ್ನು ಕೇಳಿದರು. ಆ ಸಂದರ್ಭದಲ್ಲಿ ಹಲ್ಲೆ ಮಾಡಿದ ವ್ಯಕ್ತಿಯ ಮಾಹಿತಿಯನ್ನೇಕೆ ಕೇಳಿದರು. ಆ ಬಗ್ಗೆ ನನಗೇನು ಗೊತ್ತಿತ್ತು. ವ್ಯಕ್ತಿಯನ್ನು ತೋರಿಸಿದ್ದರು ಸಹ ಪೊಲೀಸರು ಯಾವುದೇ ಕ್ರಮಕೈಗೊಳ್ಳಲಿಲ್ಲ. ಹಲ್ಲೆ ಮಾಡಿದ ವ್ಯಕ್ತಿ ಸ್ವತಂತ್ರವಾಗಿ ಹೋಗಲು ಪರೋಕ್ಷವಾಗಿ ಅನುವು ಮಾಡಿಕೊಟ್ಟರು ಎಂದು ಹೇಳಿದ್ದಾರೆ.