ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪ್ರಥಮ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಥೆ ಸಿನಿಮಾ ಆಗಲಿದೆ. ಚುನಾವಣೆಗೆ ಮುನ್ನ ಈ ಚಿತ್ರವನ್ನು ತೆರೆಗೆ ತರಲು ಈಗಾಗಲೇ ಸಿದ್ಧತೆಗಳು ನಡೆದಿವೆ.
ಭಾಗಿನಿ (ಬಂಗಾಳದ ಹೆಣ್ಣು ಹುಲಿ) ಎಂಬ ಹೆಸರಿರುವ ಈ ಚಿತ್ರದಲ್ಲಿ ಮಮತಾ ಅವರ ಬಾಲ್ಯದಿಂದ ಆಕೆ ರಾಜಕೀಯದಲ್ಲಿ ಬೆಳೆದ ಬಂದ ದಾರಿಯ ಕಥೆಯನ್ನು ಚಿತ್ರಿಸಲಾಗಿದೆ.
ಇದೊಂದು ಸ್ಫೂತಿದಾಯಕ ಚಿತ್ರವಾಗಿದ್ದು, ಮಮತಾ ಅವರ ರಾಜಕೀಯ ಹೋರಾಟ ಸಾಧನೆಗಳನ್ನು ಇಲ್ಲಿ ತೋರಿಸಲಾಗಿದೆ. ಇಂದಿರಾ ಬ್ಯಾನರ್ಜಿ ಎಂಬ ಕಥಾಪಾತ್ರಕ್ಕೆ ರೂಮಾ ಚತ್ರಬೊರ್ತಿ ಜೀವ ತುಂಬಿದ್ದು, ಮಮತಾ ಅವರ ಜೀವನಗಾಥೆ ಇಲ್ಲಿ ಅನಾವರಣವಾಗಲಿದೆ.
ಈ ಸಿನಿಮಾ ಬಗ್ಗೆ ದೀದಿ ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ನಾವು ಶೇ.99 ರಷ್ಟು ಶೂಟಿಂಗ್ ಮುಗಿಸಿದ್ದೇವೆ ಎಂದು ಸಿನಿಮಾ ನಿರ್ದೇಶಕ ನೆಹಾಲ್ ದತ್ತಾ ಹೇಳಿದ್ದಾರೆ.