ಹೊಸ ವರ್ಷದಲ್ಲಿ ಆನ್‍ಲೈನ್ ವಹಿವಾಟು: 38 ಶತಕೋಟಿ ಡಾಲರ್‍ನತ್ತ

ಹೊಸ ವರ್ಷದಲ್ಲಿ ದೇಶದ ಆನ್‍ಲೈನ್ ವಹಿವಾಟು ಪ್ರಮಾಣ 3,800 ಕೋಟಿ ಡಾಲರ್ ತಲುಪುವ ಅಂದಾಜುಗಳಿವೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟ...
ಆನ್‍ಲೈನ್ ವಹಿವಾಟು
ಆನ್‍ಲೈನ್ ವಹಿವಾಟು

ನವದೆಹಲಿ: ಹೊಸ ವರ್ಷದಲ್ಲಿ ದೇಶದ ಆನ್‍ಲೈನ್ ವಹಿವಾಟು ಪ್ರಮಾಣ 3,800 ಕೋಟಿ ಡಾಲರ್ ತಲುಪುವ ಅಂದಾಜುಗಳಿವೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟ ಅಸೋಚಾಮ್ ಅಧ್ಯಯನ ಹೇಳಿದೆ.

ಹೆಚ್ಚುತ್ತಿರುವ ಇಂಟರ್ ನೆಟ್ ಮತ್ತು ಮೊಬೈಲ್ ಬಳಕೆ, ಆನ್‍ಲೈನ್ ಮೂಲಕ ಬಿಲ್ ಪಾವತಿಗಳು ಹೆಚ್ಚಾಗುತ್ತಿರುವುದರಿಂದ ಆನ್‍ಲೈನ್ ಮಾರುಕಟ್ಟೆ ವೇಗವಾಗಿ ಬೆಳೆಯಲಿದೆ ಎಂದು ಅಧ್ಯಯನ ವಿವರಿಸಿದೆ.

ಕಳೆದ ವರ್ಷ ಆನ್‍ಲೈನ್ ವಹಿವಾಟಿನಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ನೀಡಿದ್ದರಿಂದ ಖರೀದಿ ಟ್ರೆಂಡ್ ಹೆಚ್ಚಾಗಿತ್ತು. ಈ ವರ್ಷದಲ್ಲಿ ಇ-ಮಾರುಕಟ್ಟೆಯಲ್ಲಿ ಆಯ್ಕೆ ಅವಕಾಶಗಳು ಹೆಚ್ಚಾಗಿರಲಿದೆ ಎಂದು ಹೇಳಿದೆ. ಸ್ಮಾರ್ಟ್ ಪೋನ್ ಗಳ ಮೂಲಕ ಶಾಪಿಂಗ್ ಮಾಡುತ್ತಿರುವುದು ಕ್ರಾಂತಿಕಾರಿ ಬದಲಾವಣೆಯಾಗಿದೆ. ಸ್ಮಾರ್ಟ್ ಪೋನ್‍ಗಳ ವಹಿವಾಟು ಶೇ.70ರಷ್ಟು ಕೊಡುಗೆ ನೀಡಿದೆ.

ಕಳೆದ ವರ್ಷ ಶಾಪಿಂಗ್‍ಗೆ ಸಂಬಂಧಿಸಿದಂತೆ ಶೇ.78ರಷ್ಟು ವಿಚಾರಣೆ ಸ್ಮಾಟ್ರ್ ಪೋನ್ ಮೂಲಕ ಮಾಡಲಾಗಿದೆ. 2013ರಲ್ಲಿ ಈ ಪ್ರಮಾಣ ಶೇ.46ರಷ್ಟು ಮಾತ್ರ ಇತ್ತು ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com