ಪಾಕಿಸ್ತಾನ-ಭಾರತ ಬಾವುಟ
ದೇಶ
ಭಾರತ-ಪಾಕ್ ಒಪ್ಪಂದಕ್ಕೆ ಬೆಳ್ಳಿ ಹಬ್ಬದ ಸಂಭ್ರಮ
ಹೊಸ ವರ್ಷದ ನಿಮಿತ್ತ ಈ ಬಾರಿಯೂ ಪಾಕಿಸ್ತಾನ ಮತ್ತು ಭಾರತ ಪರಸ್ಪರ ಪರಮಾಣು ಸ್ಥಾವರ ಮತ್ತು ಕೈದಿಗಳ ವಿವರಗಳನ್ನು ಪರಸ್ಪರ ಹಸ್ತಾಂತರ...
ಇಸ್ಲಾಮಾಬಾದ್: ಹೊಸ ವರ್ಷದ ನಿಮಿತ್ತ ಈ ಬಾರಿಯೂ ಪಾಕಿಸ್ತಾನ ಮತ್ತು ಭಾರತ ಪರಸ್ಪರ ಪರಮಾಣು ಸ್ಥಾವರ ಮತ್ತು ಕೈದಿಗಳ ವಿವರಗಳನ್ನು ಪರಸ್ಪರ ಹಸ್ತಾಂತರ ಮಾಡಿವೆ.
ನವದೆಹಲಿಯಲ್ಲಿ ಮತ್ತು ಇಸ್ಲಾಮಾಬಾದ್‍ನಲ್ಲಿ ಈ ಎರಡೂ ದೇಶಗಳ ಸರ್ಕಾರಗಳ ಹಿರಿಯ ಅಧಿಕಾರಿಗಳು 25ನೇ ವರ್ಷ ಈ ಪ್ರಕ್ರಿಯೆ ನಡೆಸಿದರು. ಹೀಗಾಗಿ, ಹಾಲಿ ವರ್ಷ ಎರಡು ದೇಶಗಳ ನಡುವಿನ ಒಪ್ಪಂದಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ.
1988ರ ಡಿ.31ರಂದು ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 1991ರ ಜ.27ರಂದು ಎರಡೂ ದೇಶಗಳು ಪರಸ್ಪರ ಪರಮಾಣು ಸ್ಥಾವರಗಳು ಮತ್ತು ಇತರ ವ್ಯೂಹಾತ್ಮಕ ಮಾಹಿತಿಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾ ಬಂದಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ