ಪಠಾಣ್ ಕೋಟ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಮೂವರು ಯೋಧರು ಹುತಾತ್ಮ

ಪಠಾಣ್ ಕೋಟ್ ನಲ್ಲಿ ಸೇನಾ ವಾಯು ನೆಲೆಯಲ್ಲಿ ಉಗ್ರರು ಮತ್ತೆ ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದು, ಉಗ್ರರು ಸ್ಪೋಟಿಸಿದ ಐಇಡಿ ಸ್ಪೋಟಕ್ಕೆ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ಭಾನುವಾರ ನಡೆದಿದೆ...
ಪಠಾಣ್ ಕೋಟ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಮೂವರು ಯೋಧರು ಸಾವು (ಸಾಂದರ್ಭಿಕ ಚಿತ್ರ)
ಪಠಾಣ್ ಕೋಟ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಮೂವರು ಯೋಧರು ಸಾವು (ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ಪಠಾಣ್ ಕೋಟ್ ನಲ್ಲಿ ಸೇನಾ ವಾಯು ನೆಲೆಯಲ್ಲಿ ಉಗ್ರರು ಮತ್ತೆ ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದು, ಉಗ್ರರು ಸ್ಪೋಟಿಸಿದ ಐಇಡಿ ಸ್ಪೋಟಕ್ಕೆ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ಭಾನುವಾರ ನಡೆದಿದೆ.

ವಾಯುನೆಲೆ ಮೇಲೆ ನಿನ್ನೆಯಷ್ಟೇ ಅಟ್ಟಹಾಸ ಮೆರೆದಿದ್ದ 6 ಭಯೋತ್ಪಾದಕರನ್ನು ಸೇನಾಧಿಕಾರಿಗಳು ಹೊರೆದುರುಳಿಸಿದ್ದರು. ಉಗ್ರರ ಗುಂಪಿನಲ್ಲಿದ್ದ ಕೆಲವರು ತಲೆಮರೆಸಿಕೊಂಡಿರುವುದಾಗಿ ಹಲವು ಶಂಕೆಗಳು ಮೂಡಿದ್ದವು. ಇದೀಗ ಮತ್ತೆ ವಾಯು ನೆಲೆಯಲ್ಲಿ ತೆಲೆಯೆತ್ತಿರುವ ಉಗ್ರರು ವಾಯುನೆಲೆಯ ಮೇಲೆ ಮತ್ತೆ ದಾಳಿ ನಡೆಸುತ್ತಿದ್ದು, ಗ್ರೆನೇಡ್ ಗಳನ್ನು ಸ್ಪೋಟಸುತ್ತಿದ್ದಾರೆ.

ಉಗ್ರರು ದಾಳಿಯಿಂದಾಗಿ ಇದೀಗ ಮೂವರು ಯೋಧರು ಹುತಾತ್ಮರಾಗಿದ್ದು, ಸ್ಪೋಟದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರರನ್ನು ಸದೆ ಬಡಿಯುವ ಕಾರ್ಯಾಚರಣೆ ಮುಂದುವರೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com