ಬಿಹಾರ ಸಿಎಂ ನಿತೀಶ್ ಗಿಂತ ಮಗ ನಿಶಾಂತ್ ಶ್ರೀಮಂತ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗಿಂತ ಅವರ ಪುತ್ರ ನಿಶಾಂತ್ ಶ್ರೀಮಂತರು...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗಿಂತ ಅವರ ಪುತ್ರ ನಿಶಾಂತ್ ಶ್ರೀಮಂತರು.
ಮೂರು ದಿನಗಳ ಹಿಂದೆಯಷ್ಟೇ ನಿತೀಶ್ ಕುಮಾರ್ ಹಾಗೂ ಅವರ ಪುತ್ರ ನಿಶಾಂತ್ ಅವರು ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರ ಪ್ರಕಾರ ನಿಶಾಂತ್ ಅವರ ಒಟ್ಟು ಆಸ್ತಿ ಮೌಲ್ಯ ರು.2.11 ಕೋಟಿ.
ಇನ್ನು, ಐದನೇ ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ ನಿತೀಶ್ ಅವರು 59 ಲಕ್ಷ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿದ್ದಾರೆ. ಹಸು ಹಾಗೂ ಎರಡು ಕರು ಸಾಕಿದ್ದಾರೆ. ಒಂದು ಫ್ಲ್ಯಾಟ್ ಇದೆ. ಕೊಡೆಗೆಯಾಗಿ ಬಂದು ಕಾರು ಸೇರಿದಂತೆ ಒಟ್ಟು 2 ಕಾರುಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 
ಆದರೆ, ಮಗನ ಬಳಿ ರು. 94 ಮೌಲ್ಯದ ಚರಾಸ್ತಿ ಇದ್ದು, ಪಾಟ್ನಾ ಹಾಗೂ ನಳಂದಾ ಜಿಲ್ಲೆಯಲ್ಲಿರುವ ಕಲ್ಯಾಣಿ ಭಾಗ್ ನಲ್ಲಿರುವ ಮನೆ ಸೇರಿ ರು.1.94ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 
ಇನ್ನು ಲಾಲು ಪ್ರಸಾದ್ ಅವರ ಇಬ್ಬರು ಮಕ್ಕಳು ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಬಿಹಾರ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ ಪ್ರಸಾದ್ ಯಾದವ್ ರು.22.5 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ರು.91.52 ಲಕ್ಷದ ಚರಾಸ್ತಿ ಹೊಂದಿದ್ದು, ಷೇರು ಮಾರುಕಟ್ಟೆಯಲ್ಲಿ ರು.5.38 ಲಕ್ಷ ಹೂಡಿಕೆ ಮಾಡಿದ್ದಾರೆ. 
ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ರು.25.10 ಲಕ್ಷ ಚರಾಸ್ತಿ ಹಾಗೂ ರು,79.27 ಲಕ್ಷ ಸ್ಥಿರಾಸ್ತಿ ಹೊಂದಿದ್ದು, ಬ್ಯಾಂಕ್ ಖಾತೆಯಲ್ಲಿ ರು.4.56 ಲಕ್ಷ ಹಣ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com