ನವದೆಹಲಿ: ಉತ್ತರ ಕೊರಿಯಾ ಹೈಡ್ರೋಜನ್ ಬಾಂಬ್ ಅಭಿವೃದ್ಧಿಪಡಿಸಿ ಪರೀಕ್ಷೆ ನಡೆಸಿರುವುದನ್ನು ಖಂಡಿಸಿರುವ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಭಾರತವೂ ದನಿಗೂಡಿಸಿದ್ದು , ಉತ್ತರ ಕೊರಿಯಾ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರುವುದು ಆತಂಕಕಾರಿ ಎಂದು ಹೇಳಿದೆ.
ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, ಉತ್ತರ ಕೊರಿಯಾ ಶಾಂತಿ ಕದಡುವುದಕ್ಕೆ ಕಾರಣವಾಗುವ ಕ್ರಿಯೆಗಳಿಂದ ದೂರವುಳಿಯಬೇಕು ಎಂದು ಕರೆ ನೀಡಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಕಳೆದ ತಿಂಗಳೇ ತಮ್ಮ ದೇಶ ಹೈಡ್ರೋಜನ್ ಬಾಂಬ್ ನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಘೋಷಿಸಿದ್ದರು. ಜ.6 ರಂದು ಪರೀಕ್ಷೆ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಘೋಷಿಸಿದ್ದು, ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಉತ್ತರ ಕೊರಿಯಾ ಈಗಾಗಲೇ ಮೂರು ಪರಮಾಣು ಬಾಂಬ್ ಗಳ ಪರೀಕ್ಷೆ ನಡೆಸಿದೆ. ಆದರೆ ಹೈಡ್ರೋಜನ್ ಬಾಂಬ್ ಪರಮಾಣು ಬಾಂಬ್ ಗಿಂತ ಹೆಚ್ಚು ಅಪಾಯಕಾರಿಯಾಗಿದೆ.
Advertisement