ಬಾಕ್ಸೈಟ್ ಗಣಿಗಾರಿಕೆಗೆ ಬೆಂಬಲ: ಮಾವೊವಾದಿಗಳಿಂದ ಟಿಡಿಪಿ ಮುಖಂಡನ ಹತ್ಯೆ

ಬಾಕ್ಸೈಟ್ ಗಣಿಗಾರಿಕೆಗೆ ಬೆಂಬಲ ನೀಡುತ್ತಿದ್ದ ಕಾರಣ ಮಾವೋವಾದಿಗಳು ತೆಲುಗು ದೇಶಂ ಪಕ್ಷದ ಮುಖಂಡರೊಬ್ಬರನ್ನು ಹತ್ಯೆ ಮಾಡಿದ್ದಾರೆ.
ಮಾವೊವಾದಿಗಳಿಂದ ಟಿಡಿಪಿ ಮುಖಂಡನ ಹತ್ಯೆ
ಮಾವೊವಾದಿಗಳಿಂದ ಟಿಡಿಪಿ ಮುಖಂಡನ ಹತ್ಯೆ

ವಿಶಾಖಪಟ್ಟಣ: ಬಾಕ್ಸೈಟ್ ಗಣಿಗಾರಿಕೆಗೆ ಬೆಂಬಲ ನೀಡುತ್ತಿದ್ದ ಕಾರಣ ಮಾವೋವಾದಿಗಳು ತೆಲುಗು ದೇಶಂ ಪಕ್ಷದ ಮುಖಂಡರೊಬ್ಬರನ್ನು ಹತ್ಯೆ ಮಾಡಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಗ್ರಾಮವೊಂದರ ಮಾಜಿ ಮುಖ್ಯಸ್ಥರಾಗಿದ್ದ ತೆಲುಗು ದೇಶಂ ಪಕ್ಷ ಮುಖಂಡ ಎಸ್ ವೆಂಕಟರಮಣ ಅವರನ್ನು ಜ.5 ರಂದು ರಾತ್ರಿ ಮಾವೋವಾದಿಗಳು ಅಪಹರಿಸಿದ್ದರು. ಜ.6 ರಂದು ಜಿ.ಕೆ ವೀದಿ ಮಂಡಲ್ ಗ್ರಾಮದವರಿಗೆ ಸಂದೇಶ ಕಳಿಸಿದ್ದು, ಊರಿನ ಮಾಜಿ ಮುಖಂಡ ಬಾಕ್ಸೈಟ್ ಗಣಿಗಾರಿಕೆಗೆ ಬೆಂಬಲಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಾಕ್ಸೈಟ್ ಮೈನಿಂಗ್ ಗೆ ಬೆಂಬಲಿಸಿದ್ದಷ್ಟೇ ಅಲ್ಲದೇ ಪೊಲೀಸರ ಪರವಾಗಿ ಮಾವೋವಾದಿಗಳ ಬಗ್ಗೆ ಬೇಹುಗಾರಿಕೆ ನಡೆಸುತ್ತಿದ್ದದ್ದೂ ಸಹ ಹತ್ಯೆಯ ಹಿಂದಿರುವ ಕಾರಣ ಎಂದು ಮಾವೋವಾದಿಗಳು ಹೇಳಿದ್ದು ಬಾಕ್ಸೈಟ್ ಗಣಿಗಾರಿಕೆಗೆ ಬೆಂಬಲ ನೀಡದಂತೆ ಬಿಜೆಪಿ, ಟಿಡಿಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹತ್ಯೆಯಾಗಿರುವ ಟಿಡಿಪಿ ಮುಖಂಡನಿಗೆ ಈ ಹಿಂದೆಯೂ ಹಲವು ಬಾರಿ ಎಚ್ಚರಿಕೆ ನೀಡಿದ್ದ ಮಾವೋವಾದಿಗಳು, ಟಿಡಿಪಿ ಪಕ್ಷದ ಚಟುವಟಿಕೆಯಲ್ಲಿ ತೊಡಗದಂತೆ ಸೂಚನೆ ನೀಡಿದ್ದರು. ಗ್ರಾಮದಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಲು ಆಂಧ್ರಪ್ರದೇಶ ಸರ್ಕಾರ ನೀಡಿರುವ ಅನುಮತಿಗೆ ಮಾವೋವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com