
ನವದೆಹಲಿ: ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹಿನ್ನೆಲೆ ಬಂಧಕ್ಕೀಡಾಗಿರುವ ಬೆಂಗಳೂರು ಮದರಸ ಶಿಕ್ಷಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೌಲಾನ ಸೈಯದ್ ಅನ್ಸರ್ ಶಾ ಖಾಸ್ಮಿ ಎಂದು ಗುರುತಿಸಲಾಗಿದ್ದು, ದೆಹಲಿ ಸ್ಪೇಷಲ್ ಸೇಲ್ ಪೊಲೀಸರು ಗುರುವಾರ ಬೆಂಗಳೂರಿನಲ್ಲಿ ಬಂಧಿಸಿ, ದೆಹಲಿಯ ಪಟಿಯಾಲ ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ಜನವರಿ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ದೆಹಲಿ ಪೊಲೀಸರ ವಿಚಾರಣೆ ವೇಳೆ ಸೈಯದ್ ಅನ್ಸರ್ ಶಾ ಭಯಾನಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಬೆಂಗಳೂರಿನ ಬನಶಂಕರಿಯ ಇಲಿಯಾಸ್ ನಗರದಲ್ಲಿ ವಾಸವಾಗಿದ್ದು ಅಲ್ ಖೈದಾ ಸಂಘಟನೆ ಪರವಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಉಗ್ರವಾದಕ್ಕೆ ಯುವಕರನ್ನು ಪ್ರಚೋಧಿಸುತ್ತಿದ್ದ ಹಾಗೂ ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ. ಅಲ್ಲದೆ ದೇಶದ ಹಲವೆಡೆ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಗಳನ್ನು ಹೇಳಿದ್ದಾನೆ.
Advertisement