ಭಾರತ ಸೇರಿದಂತೆ ವಿಶ್ವದಾದ್ಯಂತ ಇಂಟರ್ನೆಟ್ ಬಳಕೆ ಹೆಚ್ಚುತ್ತಿದ್ದು, 2015ರಲ್ಲಿ ಪ್ರತಿ ಸೆಂಕೆಂಡ್ಗೆ 75 ಜಿಬಿಯಷ್ಟು ಅಶ್ಲೀಲ ವೆಬ್ಸೈಟ್ಗಳನ್ನು ವೀಕ್ಷಿಸಲಾಗಿದೆ.
ಈ ವರ್ಷ ಶೇ.30ರಷ್ಟು ಮಹಿಳೆಯರು ಅಶ್ಲೀಲ ಚಿತ್ರವನ್ನು ವೀಕ್ಷಿಸಿದ್ದು, ಆ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಅಶ್ಲೀಲ ಚಿತ್ರ ವೀಕ್ಷಣೆಯಲ್ಲಿ ಬ್ರಿಟನ್ ಮೊದಲನೇ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ಕೆನಡಾ ಮತ್ತು ಜರ್ಮನ್ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.
ಅಶ್ಲೀಲ ವೆಬ್ಸೈಟ್ವೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತೀಯರು ಅಶ್ಲೀಲ ವೈಬ್ಸೈಟ್ನಲ್ಲಿ ಸರಾಸರಿ 9 ನಿಮಿಷ 30 ಸೆಕೆಂಡ್ಗಳ ಕಾಲ ವೀಕ್ಷಣೆ ಮಾಡಿದ್ದಾರೆ. ಇನ್ನು ಅಮೆರಿಕದವರು 9 ನಿಮಿಷ 51 ಸೆಕೆಂಡ್ ಹಾಗೂ ಬ್ರಿಟಿಷರು 9 ನಿಮಿಷ 18 ಸೆಕೆಂಡ್ಗಳ ಕಾಲ ಅಶ್ಲೀಲ ವೆಬ್ಸೈಟ್ ವೀಕ್ಷಣೆ ಮಾಡಿದ್ದಾರೆ.
ಅಶ್ಲೀಲ್ ವೈಬ್ಸೈಟ್ಗಳನ್ನು ರಜಾ ದಿನಗಳಲ್ಲಿ ಹಾಗೂ ರಾತ್ರಿ 10 ಗಂಟೆಯಿಂದ 12 ಗಂಟೆಯವರೆಗೆ ಹೆಚ್ಚಾಗಿ ವೀಕ್ಷಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.