ವಿಮಾನ ಅಪಘಾತದಲ್ಲುಂಟಾದ ತೀವ್ರ ಗಾಯವೇ ನೇತಾಜಿ ಸಾವಿಗೆ ಕಾರಣ

ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸಾವಿಗೀಡಾಗಿದ್ದರು. ಈ ದುರಂತದ 5 ಸಾಕ್ಷಿಗಳು ನೀಡಿರುವ ಹೇಳಿಕೆಯನ್ನು ವೆಬ್‌ಸೈಟ್‌...
ನೇತಾಜಿ ಸುಭಾಶ್‌ಚಂದ್ರ ಬೋಸ್
ನೇತಾಜಿ ಸುಭಾಶ್‌ಚಂದ್ರ ಬೋಸ್
Updated on
ಲಂಡನ್ : ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರ ಸಾವಿನ ನಿಗೂಢತೆ ಬಗ್ಗೆ ಬ್ರಿಟನ್ ಮೂಲದ ವೆಬ್‌ಸೈಟ್‌ನಲ್ಲೊಂದು ಲೇಖನ ಪ್ರಕಟವಾಗಿದೆ.
ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸಾವಿಗೀಡಾಗಿದ್ದರು. ಈ ದುರಂತದ 5 ಸಾಕ್ಷಿಗಳು ನೀಡಿರುವ ಹೇಳಿಕೆಯನ್ನು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಐವರು ಸಾಕ್ಷಿಗಳಲ್ಲಿ ನೇತಾಜಿಯ ಆಪ್ತರೊಬ್ಬರು, ಇಬ್ಬರು ಜಪಾನಿನ ವೈದ್ಯರು, ಒಬ್ಬ ದುಭಾಷಿ ಮತ್ತು ಇಬ್ಬರು ನರ್ಸ್‌ಗಳಿದ್ದಾರೆ.  1945 ಆಗಸ್ಟ್ 18 ರಂದು ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ನೇತಾಜಿ ಸಾವಿಗೀಡಾಗಿದ್ದರು ಎಂದು ಇವರು ಹೇಳಿದ್ದಾರೆ.
ಈ ಸಾಕ್ಷಿಗಳ ಪ್ರಕಾರ ನೇತಾಜಿ ಸಾವಿನ ಬಗ್ಗೆ ಯಾವುದೇ ಬೇರೆ ಅಭಿಪ್ರಾಯಗಳಿಲ್ಲ. ವಿಮಾನ ಅಪಘಾತದಲ್ಲಿ ಅವರಿ ಗೆ ತೀವ್ರ ಗಾಯಗಳಾಗಿತ್ತು. ಅವರು 18 ಅಗಸ್ಟ್ 1945ರ ರಾತ್ರಿಯೇ ಮರಣವಪ್ಪಿದ್ದರು ಎಂದು www.bosefiles.info ಎಂಬ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com