ನ್ಯಾಷನಲ್ ಹೆರಾಲ್ಡ್ ಲಾಭ ರಹಿತ ಸಂಸ್ಥೆ

ಕಾನೂನು ಹೋರಾಟದಲ್ಲಿ ತೊಡಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃಸಂಸ್ಥೆ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ (ಎಜೆಎಲ್) ಇನ್ನು ಮುಂದೆ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಲಿದೆ...
ಎಜೆಎಲ್ ಮುಖ್ಯಸ್ಥ ಮೋತಿಲಾಲ್ ವೋರಾ (ಸಂಗ್ರಹ ಚಿತ್ರ)
ಎಜೆಎಲ್ ಮುಖ್ಯಸ್ಥ ಮೋತಿಲಾಲ್ ವೋರಾ (ಸಂಗ್ರಹ ಚಿತ್ರ)

ಲಖನೌ: ಕಾನೂನು ಹೋರಾಟದಲ್ಲಿ ತೊಡಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃಸಂಸ್ಥೆ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ (ಎಜೆಎಲ್) ಇನ್ನು ಮುಂದೆ ಲಾಭೋದ್ದೇಶವಿಲ್ಲದ  ಸಂಸ್ಥೆಯಾಗಲಿದೆ.

ಈ ಬಗ್ಗೆ ಲಖನೌದಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಜೆಎಲ್ ನ ವ್ಯವಸ್ಥಾಪಕ ನಿರ್ದೇಶಕ, ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ  ತಿಳಿಸಿದ್ದಾರೆ. ಇದರ ಜತೆಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪುನಾರಂಭಗೊಳಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುತ್ತದೆ ಮತ್ತು ಲಖನೌದಿಂದಲೂ ಅದು ಪ್ರಕಟವಾಗಲಿದೆ  ಎಂದು ವೋರಾ ಹೇಳಿದ್ದಾರೆ.

ಮೂರು ಗ೦ಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲ ಸದಸ್ಯರು ಎಜೆಎಲ್‍ನ್ನು ಲಾಭೋದ್ದೇಶ ಇಲ್ಲದ ಸ೦ಸ್ಥೆಯಾಗಿ ಪರಿವತಿ೯ಸಲು ಒಮ್ಮತದ ನಿಧಾ೯ರ ಕೈಗೊ೦ಡಿದ್ದಾರೆ. 2013ರ ಕ೦ಪನಿ  ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಈ ಮಾಪಾ೯ಡು ಮಾಡಲಾಗಿದೆ. ಪತ್ರಿಕೆಯನ್ನು ಪುನಾರ೦ಭಿಸುವ ಬಗ್ಗೆ ಗ೦ಭೀರ ಚಿ೦ತನೆ ನಡೆದಿದ್ದು, ಕ೦ಪನಿಯನ್ನು ಪುನರ್ ರಚಿಸಿ ಲಖನೌ ಸೇರಿ ಎಲ್ಲ  ಕಡೆಗಳಲ್ಲಿ ಹಿ೦ದಿನ೦ತೆ ಪತ್ರಿಕೆಯನ್ನು ಹೊರತರಲು ಉದ್ದೇಶಿಸಲಾಗಿದೆ ಎ೦ದು ವೋರಾ ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಖರೀದಿಸಿರುವ ಯ೦ಗ್ ಇ೦ಡಿಯಾ ಸ೦ಸ್ಥೆಯಲ್ಲಿ ಕಾ೦ಗ್ರೆಸ್ ಅಧ್ಯಕ್ಷೆ ಸೋನಿಯಾ ಗಾ೦ಧಿ, ಉಪಾಧ್ಯಕ್ಷ ರಾಹುಲ್ ಗಾ೦ಧಿತಲಾ. ಶೇ.38ರಷ್ಟು ಷೇರು ಹೊ೦ದಿದ್ದಾರೆ.  ವಾಣಿಜ್ಯ ಉದ್ದೇಶಕ್ಕಾಗಿ ಎಐಸಿಸಿಯೂ 90 ಕೋಟಿ ಸಾಲ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರ ಸ೦ಬ೦ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com