ಗಾಂಧಿ ಪ್ರತಿಮೆ ಮುಖಕ್ಕೆ ಮಣ್ಣು, ಇಸಿಸ್ ಜಿಂದಾಬಾದ್ ಎಂದ ದುಷ್ಕರ್ಮಿಗಳು

ರಾಜಸ್ತಾನ ರಾಜಧಾನಿ ಜೈಪುರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದು, ಪ್ರತಿಮೆ ಮೇಲೆ ಇಸಿಸ್ ಜಿಂದಾಬಾದ್ ಎಂಬ ಪ್ರಚೋದನಾ ವಾಕ್ಯಗಳನ್ನು ಬರೆದಿದ್ದಾರೆ..
ಭಗ್ನಗೊಳಿಸಿರುವ ಗಾಂಧಿ ಪ್ರತಿಮೆ (ಚಿತ್ರಕೃಪೆ: ಡಿಎನ್ ಎ)
ಭಗ್ನಗೊಳಿಸಿರುವ ಗಾಂಧಿ ಪ್ರತಿಮೆ (ಚಿತ್ರಕೃಪೆ: ಡಿಎನ್ ಎ)

ಜೈಪುರ: ರಾಜಸ್ತಾನ ರಾಜಧಾನಿ ಜೈಪುರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದು, ಪ್ರತಿಮೆ ಮೇಲೆ ಇಸಿಸ್ ಜಿಂದಾಬಾದ್ ಎಂಬ ಪ್ರಚೋದನಾ ವಾಕ್ಯಗಳನ್ನು ಬರೆದಿದ್ದಾರೆ.

ದೇಶಾದ್ಯಂತ ಗಣರಾಜ್ಯೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಕಾರ್ಯಕ್ರಮಕ್ಕೆ ಉಗ್ರ ದಾಳಿ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಕಳೆದ ವಾರ ದೇಶಾದ್ಯಂತ ಕಾರ್ಯಾಚರಣೆ ನಡೆಸಿದ್ದ ಉಗ್ರ ನಿಗ್ರಹ ದಳದ  ಅಧಿಕಾರಿಗಳು ಶಂಕಿತ ಉಗ್ರರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಇಂದು ರಾಜಸ್ತಾನ ರಾಜಧಾನಿ ಜೈಪುರದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ಅಲ್ಲದೆ  ಮೂರ್ತಿ ಹಿಂದೆ ಉಗ್ರಗಾಮಿ ಸಂಘಟನೆ ಇಸಿಸ್ ಜಿಂದಾಬಾದ್ ಎಂಬ ಘೋಷಣೆಗಳನ್ನೂ ಕೂಡ ಬರೆದಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಜೈಪುರದ ಡುಡು ಪ್ರದೇಶದಲ್ಲಿ ಪ್ರಕ್ಷುಬ್ದ ವಾತಾವರಣ  ನಿರ್ಮಾಣವಾಗಿದ್ದು, ಸ್ಥಳೀಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಇನ್ನು ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯ ನಡೆಸುವ ಕುರಿತು ಕೂಡ ಎಚ್ಚರಿಕೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಡುಡು ಪೊಲೀಸರು ತನಿಖೆ ನಡೆಸುತ್ತಿದ್ದು, ಅಪರಾಧಿಗಳ ಬಂಧನಕ್ಕೆ ಬಲೆ  ಬೀಸಿದ್ದಾರೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರ ಇಸಿಸ್ ಬೆಂಬಲಿತ ಸುಮಾರು 94 ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಿತ್ತು. ಇದರ ಸೇಡಿಗಾಗಿ ದುಷ್ಕರ್ಮಿಗಳು ಹೀಗೆ ಗಾಂಧಿ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ  ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com