ಪೊಲೀಸರ ಪರಿಶೀಲನೆಯಿಲ್ಲದೆ ಪಾಸ್ ಪೋರ್ಟ್: ಸರಳಗೊಂಡ ಪ್ರಕ್ರಿಯೆ

ಸಾರ್ವಜನಿಕರಿಗೆ ಇಲ್ಲೊಂದು ಸಿಹಿಸುದ್ದಿ. ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಸಾಮಾನ್ಯ ದರ್ಜೆಯಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಾರ್ವಜನಿಕರಿಗೆ ಇಲ್ಲೊಂದು ಸಿಹಿಸುದ್ದಿ. ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಸಾಮಾನ್ಯ ದರ್ಜೆಯಡಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪೊಲೀಸ್‌ ಪರಿಶೀಲನೆಯಿಲ್ಲದೆ ಪಾಸ್ ಪೋರ್ಟ್ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಇಂತಹ ಮಹತ್ವದ ಅವಕಾಶವನ್ನು ನೀಡುತ್ತಿದೆ.

ಹೊಸ ಕಾನೂನಿನ ಪ್ರಕಾರ ಪಾಸ್‌ ಪೋರ್ಟ್‌ ಕಚೇರಿಯು ಇನ್ನು ಮುಂದೆ ಸಾಮಾನ್ಯ ದರ್ಜೆಯ ಅರ್ಜಿದಾರರಿಗೆ ಆದ್ಯತೆಯ  ಮೇರೆಗೆ ಪಾಸ್‌ ಪೋರ್ಟ್‌ ಜಾರಿ ಮಾಡಲಿದೆ ಮತ್ತು ಪೊಲೀಸ್‌ ಪರಿಶೀಲನೆ ದಿನವನ್ನು ಮುಂದಿನ ಯಾವುದಾದರೊಂದು ದಿನಾಂಕಕ್ಕೆ ನಿಗದಿಸಲಿದೆ.

ನೀವು ಸಾಮಾನ್ಯ ದರ್ಜೆಯ ಅರ್ಜಿ ವರ್ಗದಡಿಯಲ್ಲಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುತ್ತೀರಿ ಎಂದಿಟ್ಟುಕೊಳ್ಳಿ. ಅರ್ಜಿಯೊಂದಿಗೆ ಆಧಾರ್ ಕಾರ್ಡು, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡು ಮತ್ತು ಯಾವುದೇ ಕ್ರಿಮಿನಲ್ ಕೇಸು ಬಾಕಿ ಇಲ್ಲ ಎಂದು ಅಫಿದವಿತ್ತಿನಲ್ಲಿ ಬರೆದು ಕೊಟ್ಟರೆ ಆದ್ಯತೆಯ ಮೇರೆಗೆ ಪಾಸ್ ಪೋರ್ಟ್ ಸಿಗುತ್ತದೆ. ನಿಮ್ಮ ಆಧಾರ್ ಸಂಖ್ಯೆ ಆನ್ ಲೈನ್ ನಲ್ಲಿ ಸರಿಯಾಗಿ ನಮೂದಿತವಾಗಿದ್ದರೆ ಪೊಲೀಸರ ಪರಿಶೀಲನೆ ನಂತರ ಅಫಿದವಿತ್ತನ್ನು ಆದ್ಯತೆ ಮೇರೆಗೆ ಪರಿಶೀಲಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com