ಕಾಪು ಮೀಸಲಾತಿಗೆ ಸರ್ಕಾರ ಬದ್ಧ: ಸಚಿವ ಪಲ್ಲೆ ರಘುನಾಥ ರೆಡ್ಡಿ

ಕಾಪು ಜನಾಂಗದ ಬೇಡಿಕೆಗಳನ್ನು ಈಡೇರಿಸಲು ಆಂಧ್ರ ಪ್ರದೇಶ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪಲ್ಲೆ ರಘುನಾಥ ರೆಡ್ಡಿ ಭಾನುವಾರ ಹೇಳಿದ್ದಾರೆ...
ಸಚಿವ ಪಲ್ಲೆ ರಘುನಾಥ ರೆಡ್ಡಿ (ಸಂಗ್ರಹ ಚಿತ್ರ)
ಸಚಿವ ಪಲ್ಲೆ ರಘುನಾಥ ರೆಡ್ಡಿ (ಸಂಗ್ರಹ ಚಿತ್ರ)

ಹೈದರಾಬಾದ್: ಕಾಪು ಜನಾಂಗದ ಬೇಡಿಕೆಗಳನ್ನು ಈಡೇರಿಸಲು ಆಂಧ್ರ ಪ್ರದೇಶ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪಲ್ಲೆ ರಘುನಾಥ ರೆಡ್ಡಿ ಭಾನುವಾರ ಹೇಳಿದ್ದಾರೆ.

ಕಾಪು ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಕಳೆದ ಹಲವು ದಿನಗಳಿಂದ ನಡೆಸುತ್ತಿರುವ "ಕಾಪು ಘರ್ಜನ" ಪ್ರತಿಭಟನಾ ರ್ಯಾಲಿ ಇಂದು ಹಿಂಸಾಚಾರಕ್ಕೆ  ತಿರುಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಆಂಧ್ರ ಪ್ರದೇಶ ಸರ್ಕಾರ ಜನಾಂಗದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಿದೆ ಎಂದು ಹೇಳಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ  ಮಾತನಾಡಿದ ಆಂಧ್ರ ಪ್ರದೇಶ ಸಚಿವ ಪಲ್ಲೆ ರಘುನಾಥ ರೆಡ್ಡಿ ಅವರು, ಮೀಸಲಾತಿಗೆ ಆಗ್ರಹಿಸಿ ಕಾಪು ಜನಾಂಗ ಹಿಂಸಾಚಾರಕ್ಕೆ ಇಳಿಯುವ ಅವಶ್ಯಕತೆ ಇಲ್ಲ. ನಿಜಕ್ಕೂ ಆಂಧ್ರ ಪ್ರದೇಶ ಸರ್ಕಾರ  ಈ ಬಗ್ಗೆ ಚಿಂತನೆ ನಡೆಸುತ್ತಿದೆ. ಕಾಪು ಜನಾಂಗದ ಅಭಿವೃದ್ದಿಗಾಗಿ 100 ಕೋಟಿ ರು. ವೆಚ್ಚದಲ್ಲಿ ಕಾರ್ಪೋರೇಷನ್ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಲ್ಲದೆ ಕಾಪು ಜನಾಂಗದ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಸಮಿತಿಯೊಂದನ್ನು ರಚನೆ ಮಾಡಲಾಗುತ್ತಿದ್ದು, ಸರ್ಕಾರ ಕಾಪು ಜನಾಂಗದ ವಿರೋಧಿ ಎಂಬ  ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದರು. ಇದೇ ವೇಳೆ ಪ್ರತಿಪಕ್ಷ ವೈಎಸ್ ಆರ್ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಪುಘರ್ಜನ ಪ್ರತಿಭಟನೆಯನ್ನು ವೈಎಸ್ ಸಿ ಪಿ  ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಪ್ರತಿಭಟನಾಕಾರರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದೆ. ಕೆಲ ಸಮಾಜ ವಿದ್ರೋಹಿ ವ್ಯಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ವಿಧ್ವಂಸಕ ಕೃತ್ಯಎಸಗಲು  ಸಂಚು ನಡೆಸುತ್ತಿದ್ದಾರೆ ಎಂದು ಸಚಿವ ರಘುನಾಥ ರೆಡ್ಡಿ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com