

ದೆಹಲಿ: ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ದಟ್ಟ ಮಂಜು ಕವಿದ ಕಾರಣ ಹಲವಾರು ವಿಮಾನಗಳು ಇಂದು ತಡವಾಗಿ ಸಂಚಾರ ಆರಂಭಿಸಿವೆ.
ದಟ್ಟ ಮಂಜಿನಿಂದಾಗಿ ವಿಮಾನ ಹಾರಾಟಕ್ಕೂ ಧಕ್ಕೆಯಾಗಿದ್ದು, ಚೆನ್ನೈನಿಂದ ದೆಹಲಿಗೆ ಹೊರಡಬೇಕಿದ್ದ 5 ವಿಮಾನಗಳು ಸೋಮವಾರ ತಡವಾಗಿ ಹಾರಾಟ ನಡೆಸಿದ್ದು, ಇಂದು ಬೆಳಿಗ್ಗೆ 9 ಗಂಟೆ ನಂತರ ವಿಮಾನಗಳು ಹಾರಾಟ ಆರಂಭಿಸಿದವು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿ ಸಂಪೂರ್ಣವಾಗಿ ಮಂಜಿನಿಂದಾವೃತವಾಗಿರುವ ಕಾರಣ ಎಳ್ಲಾ ಸರ್ಕಾರಿ ಹಾಗೂ ಖಾಸಗಿ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ಮಂಜಿನ ಕಾರಣ ಬೆಳಗ್ಗೆ 9.30ರ ಸುಮಾರಿಗೆ ಚೆನ್ನೈನಲ್ಲಿ ಲ್ಯಾಂಡ್ ಆಗಿರುವ ಏರ್ ಇಂಡಿಯಾ ವಿಮಾನಗಳು 12 ಗಂಟೆಯ ನಂತರ ಹೊರಡಿವೆದ ಎಂದು ಏರ್ ಇಂಡಿಯಾದ ವಕ್ತಾರ ಮಾಹಿತಿ ನೀಡಿದ್ದಾರೆ.