ಗುಜರಾತ್ ಭಾರತ ದೇಶದ ಭಾಗವಲ್ಲವೇ? ಸುಪ್ರಿಂ ತಪರಾಕಿ

ಸಂಸತ್ತಿನಲ್ಲಿ ಅಂಗೀಕಾರಗೊಂಡ ಕಾಯ್ದೆಗಳನ್ನು ಗುಜರಾತ್‌ನಂಥ ರಾಜ್ಯಗಳು ಏಕೆ ಜಾರಿಗೊಳಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ....
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಸಂಸತ್ತಿನಲ್ಲಿ ಅಂಗೀಕಾರಗೊಂಡ ಕಾಯ್ದೆಗಳನ್ನು ಗುಜರಾತ್‌ನಂಥ ರಾಜ್ಯಗಳು ಏಕೆ ಜಾರಿಗೊಳಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಆಹಾರ ಭದ್ರತಾ ಕಾಯ್ದೆ ಯೋಜನೆಯನ್ನು ಜಾರಿಗೊಳಿಸದ ರಾಜ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ 'ಸಂಸತ್ತು ಏನು ಮಾಡುತ್ತಿದೆ? ಗುಜರಾತ್ ದೇಶದ ಭಾಗವಲ್ಲವೇ? ಕಾಯ್ದೆ ಸಂಪೂರ್ಣ ರಾಷ್ಟ್ರಕ್ಕೆ ಅನ್ವಯಗೊಂಡರೂ, ಗುಜರಾತಿನಲ್ಲೇಕೆ ಜಾರಿಯಾಗುತ್ತಿಲ್ಲ. ಹೀಗಾದರೆ ನಾಳೆ ಸಿಆರ್‌ಪಿಸಿ, ಐಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್‌ಗಳೂ ಜಾರಿಗೊಳಿಸಲು ಆಗುವುದಿಲ್ಲವೆಂದು ಹೇಳಬಹುದು ಎಂದು ಕಿಡಿಕಾರಿದೆ.

ಸಂಸತ್ತಿನಲ್ಲಿ ಅಂಗೀಕಾರವಾದ ಕಾನೂನನ್ನು ಅನುಸರಿಸುವುದಿಲ್ಲವೆಂದು ರಾಜ್ಯವೊಂದು ಹೇಳಲು ಹೇಗೆ ಸಾಧ್ಯ? 'ಗುಜರಾತ್ ರಾಷ್ಟ್ರದಿಂದ ಬೇರ್ಪಡಲು ಇಚ್ಛಿಸುತ್ತಿದೆಯೇ? ಎಂದು ಪ್ರಶ್ನಿಸಿದೆ.

ಕ್ಷೇಮಾಭಿವೃದ್ಧಿ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ, ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಬಿಸಿಯೂಟ ಯೋಜನೆಗಳು ಬರ ಪೀಡಿತ ರಾಜ್ಯಗಳಲ್ಲಿ ಜಾರಿಗೊಂಡ ಬಗ್ಗೆ ಮಾಹಿತಿಯನ್ನು ಫೆ.10ರೊಳಗೆ ನೀಡಲು ಕೇಂದ್ರ ಸರಕಾರಕ್ಕೆ ಪೀಠ ಸೂಚಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com